VIDEO – 174 ಜನರ ಪ್ರಾಣ ತಗೆದ ಈ ಒಂದು ಪುಟ್ಬಾಲ್ ಪಂದ್ಯ
ಕ್ರೀಡಾ ಲೋಕದ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆ ಒಂದು ನಡೆದುಹೋಗಿದೆ. ಇಂಡೋನೇಷ್ಯಾದಲ್ಲಿ ನಡೆದಿದ್ದ ಈ ಒಂದು ಪುಟ್ಬಾಲ್ ಪಂದ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 174 ಜನರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶನಿವಾರ ನಡೆದ ಅರಿಮಾ ಹಾಗೂ ಪೆರ್ಸಬಯಾ ತಂಡದ ನಡುವಿನ ಪುಟ್ಬಾಲ್ ಪಂದ್ಯದಲ್ಲಿ ಅರಿಮಾ ವಿರುದ್ಧ ಪೆರ್ಸಬಯಾ ತಂಡ 3-2 ಗೋಲುಗಳಿಂದ ಗೆಲುವು ಸಾಧಿಸಿತ್ತು. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಅರಿಮಾ ತಂಡದ ಅಭಿಮಾನಿಗಳು ಹಿಂಸಾಚಾರಕ್ಕೆ ಇಳಿದಿದ್ದರು.
ಅರಿಮಾ ತಂಡದ ಅಭಿಮಾನಿಗಳು ಅವರ ಆಟಗಾರರನ್ನು ಪ್ರಶ್ನೆ ಮಾಡಲು ಮೈದಾನಕ್ಕೆ ನುಗ್ಗಿದ್ದರು. ಆಗ ಇಂಡೋನೇಷ್ಯಾ ಸೈನಿಕರು ಅರಿಮಾ ಅಭಿಮಾನಿಗಳನ್ನು ನಿಯಂತ್ರಿಸಲು ಮುಂದಾದರು. ಈ ಸಂದರ್ಭದಲ್ಲಿ ಸಂಯಮ ಕಳೆದುಕೊಂಡ ಅರೆಮಾ ಅಭಿಮಾನಿಗಳು ಹೊರ ಹೋಗಲು ಯತ್ನಿಸಿದಾಗ ಕಾಲ್ತುಳಿತ ಉಂಟಾಗಿ 174 ಜನರು ಪ್ರಾಣ ಕಳೆದುಕೊಂಡಿದ್ದಾರೆ.