
ಗೆದ್ದೇ ಗೆಲ್ಲುತ್ತದೆ ಭಾರತ, ನೋ ಡೌಟ್….!

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ಪೈನಲ್ ಪಂದ್ಯ ಭಾನುವಾರ ಮಧ್ಯಾಹ್ನ ನಡೆಯಲಿದ್ದು ಈ ಕುತೂಹಲಕಾರಿ ಹಣಾಹಣಿಯಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ. ( #CWC23Final )
ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಭಾರತಕ್ಕೆ ಸಧ್ಯ ಯಾವುದೇ ತಂಡ ಸಮವಾಗಿಲ್ಲ. ಹೇಳಿ ಕೇಳಿ ತವರು ನೆಲದಲ್ಲಿ ಪಂದ್ಯ ನಡೆಯುತ್ತಿದ್ದು, ಭಾರತ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ( “Rohit Sharma” )
ನಿರಂತರವಾಗಿ ಕಳೆದ ಹತ್ತೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ತಂಡದ ಬೃಹತ್ ಶಕ್ತಿ ಎಂದರೆ ಅದು ಆತ್ಮವಿಶ್ವಾಸ. ಜೊತೆಗೆ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್, ವಿರಾಟ್ ಕೊಹ್ಲಿ ಅವರ ರೋಚಕ ಇನ್ನಿಂಗ್ಸ್ ಗಳು ಭಾರತದ ಗೆಲುವಿಗೆ ಸಹಕಾರಿಯಾಗಿದೆ.
ಗಿಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಹಾಗೂ ಸೂರ್ಯಕುಮಾರ ಯಾದವ್ ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಇನ್ನೂ ಬೌಲಿಂಗ್ ನಲ್ಲಿ ಮೊಹಮ್ಮದ್ ಶಮಿ, ಕುಲದೀಪ್, ಜಡೆಜಾ, ಬೂಮ್ರಾ, ಸಿರಾಜ್ ಅವರ ಶ್ರೇಷ್ಠ ಪ್ರದರ್ಶನ ಮುಂದುವರಿದಿದೆ.
ಅಷ್ಟೇ ಅಲ್ಲ ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಕೂಡಾ ಭಾರತೀಯ ತಂಡದ ಮೇಲಿದೆ. ಈ ಭಾರಿ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದಂತು ಸ್ಪಷ್ಟ.