
ಅಭಿಷೇಕ್ ಅಬ್ಬರದ ಶತಕ ; ಕಂಗಾಲಾದ ಇಂಗ್ಲಿಷ್ ತಂಡ

ಮುಂಬೈ : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ T – 20 ಕ್ರಿಕೆಟ್ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ( Abhishek Sharma ) ಆಕರ್ಷಕ ಶತಕ ಸಿಡಿಸಿದ್ದು, ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಹುಟ್ಟಡಗಿಸಿದ್ದಾರೆ.
ಹೌದು ಮುಂಬೈ ನ ನಡೆಯುತ್ತಿರುವ ಕೊನೆಯ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತದ ಪರ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 100 ರನ್ ಪೂರೈಸಿ ದಾಖಲೆ ಮೆರೆದಿದ್ದಾರೆ.
ಅಂತರಾಷ್ಟ್ರೀಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರದು ಇದು ಎರಡನೇ ಟಿ ಟ್ವೆಂಟಿ ಶತಕವಾಗಿದೆ. ಸಧ್ಯ ಭಾರತ 14 ಓವರ್ 185 / 4 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿದಿದೆ.