
ಮೊಸಳೆ ಕಾಟಕ್ಕೆ ಕಂಗಾಲಾದ ಬೈಲಹೊಂಗಲ ಜನ

ಬೈಲಹೊಂಗಲ: ತಾಲೂಕಿನ ಮಾಟೋಳ್ಳಿ ಜಾಕ್ ವೆಲ್ ಸನಿಹ ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಮಾಟೋಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ಧಾರೆ.
ನದಿಯಲ್ಲಿ ಮೊಸಳೆ ಈಜಿಕೊಂಡು ಹೋಗುತ್ತಿರುವದು ಮತ್ತು ಮೊಸಳೆ ನದಿ ಹಿನ್ನೀರಿನ ಪ್ರದೇಶದಲ್ಲಿ ಆರಾಮಾಗಿ ಬಿಸಿಲು ಕಾಯಿಸಿಕೊಳ್ಳುತ್ತ ವಿಶ್ರಾಂತಿ ಪಡೆಯುತ್ತಿರುವುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ನದಿಯ ದಂಡೆಯ ಮೇಲೆ ಆಗಾಗ ಕಾಣ ಸಿಕೊಳ್ಳುತ್ತಿರುವ ಬೃಹತ್ ಗಾತ್ರದ ಮೊಸಳೆಗಳನ್ನು ಯುವಕರು ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಇದರಿಂದ ನದಿ ತೀರದ ರೈತರಲ್ಲಿ ಮತ್ತಷ್ಟು ಆತಂಕದ ಛಾಯೆ ಮೂಡಿದೆ.