Select Page

Advertisement

ಬೈಲಹೊಂಗಲ : ತವರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

ಬೈಲಹೊಂಗಲ : ತವರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

ಬೈಲಹೊಂಗಲ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮ ಹಾರುಗೊಪ್ಪ ಗೆ ಆಗಮಿಸಿದ ಯೋಧ ಶಿವಾನಂದ ಚಿನ್ನಪ್ಪ ತಳವಾರ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಹಾರುಗೊಪ್ಪ ಗ್ರಾಮದಲ್ಲಿ ಮಾಜಿ ಸೈನಿಕರು, ಗ್ರಾಮಸ್ಥರು, ಕುಟುಂಬಸ್ಥರು ಯೋಧ ಶಿವಾನಂದ ತಳವಾರ ಹಾಗೂ ಧರ್ಮ ಪತ್ನಿ ಅವರನ್ನು ಆರತಿ ಬೆಳಗಿ ಹುಮಾಲೆ ಸುರಿಸಲಾಯಿತು.

ತೆರದ ಜೀಪ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಶಾಲಾ ಮಕ್ಕಳು ಗ್ರಾಮಸ್ಥರು ಪುಷ್ಪವೃಷ್ಟಿ ಮಾಡಿದರು.
ಯೋಧ ಶಿವಾನಂದ ಅವರು ಗ್ರಾಮದ ಕ್ರಾಂತಿವೀರ ಸಂಗೋಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಯುವಕರು ಹೆಚ್ಚಾಗಿ ಸೇನೆ ಸೇರಿ ತಾಯಿನಾಡಿನ ಸೇವೆ ಮಾಡಲು ಕರೆ ನೀಡಿದರು.

ಮಾಜಿ ಸೈನಿಕರಾದ ನಾಗಪ್ಪ ಕುರುಬರ, ಶಂಕರ ತಳವಾರ, ರಮೇಶ ಪೂಜೇರಿ, ಸುರೇಶ ಕೆಂಚನಾಯ್ಕರ,
ಮಹಾಂತೇಶ ಮುತವಾಡ ಗಣ್ಯರಾದ ಮಲ್ಲಿಕಾರ್ಜುನ ತಳವಾರ, ರೇವಪ್ಪ ಗೊಡಚಿ, ವೀರಭದ್ರ ತಳವಾರ, ಆನಂದ ಸಿಂಗಾರಿ, ಮಲ್ಲಿಕಾರ್ಜುನ ಚಿಕ್ಕ ಬಸಣ್ಣವರ ಪುಂಡಲಿಕ ತಳವಾರ,

ನಾಗಪ್ಪ ಪೂಜೇರಿ, ರಾಚಯ್ಯ ಕಲ್ಲಯ್ಯನವರ, ನಿಂಗಪ್ಪ ಕುಂಟಮಾಯನ್ನವರ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರು, ಗ್ರಾ ಪಂ ಸದಸ್ಯರು ಯುವಕರು, ಶ್ರೀ ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!