
ಹಿರಿಯ ಪತ್ರಕರ್ತರಿಗೆ ವೇದಾಂತ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ

ಬೆಳಗಾವಿ : ವೇದಾಂತ ಫೌಂಡೇಶನ್ ವತಿಯಿಂದ ಕೊಡಮಾಡುವ 2025 ನೇ ಸಾಲಿನ “ ವೇದಾಂತ ಎಕ್ಸಲೆನ್ಸಿ ” ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಂಬತ್ತು ಜನ ಸಾಧಕರಿಗೆ ಪ್ರದಾನ ಮಾಡಲಾಯಿತು.
ಫೆ.1 ರಂದು ನಗರದ ಕಾಲೇಜು ರಸ್ತೆಯ ಮಹಿಳಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ರಮೇಶ್ ಹಿರೇಮಠ, ರವೀಂದ್ರ ಉಪ್ಪಾರ ಹಾಗೂ ಸಂತೋಷ ಚಿನಗುಡಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಾಂತ ಫೌಂಡೇಶನ್ ಸಂಸ್ಥಾಪಕ ಸತೀಶ್ ಪಾಟೀಲ, ಅಧ್ಯಕ್ಷೆ ಸವಿತಾ ಚಂದಗಡಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.