Select Page

Advertisement

ಹಡಪದ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ : ಸಿಹಿ ಹಂಚಿ ಸಂಭ್ರಮಾಚರಣೆ

ಹಡಪದ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ : ಸಿಹಿ ಹಂಚಿ ಸಂಭ್ರಮಾಚರಣೆ

ಬೆಳಗಾವಿ : ಹಡಪದ ಸಮುದಾಯಕ್ಕೆ ರಾಜ್ಯ ಸರ್ಕಾರ ಅಭಿವೃದ್ಧಿ ನಿಗಮ‌ ಸ್ಥಾಪಿನೆ ಹಿನ್ನಲೆ ಹಡಪದ ಸಮುದಾಯದ ಯುವಕರು ನಗರದ ಚನ್ನಮ್ಮ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ್ದ ಹಡಪದ ಸಮುದಾಯದ ಮುಖಂಡರು ರಾಜ್ಯ ಸರ್ಕಾರ ಘೋಷಿಸಿರುವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಡಪದ ಸಮುದಾಯ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ. ಬಹುದಿನಗಳ ಸಮುದಾಯದ ಬೇಡಿಕೆಗೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ನಿಗಮ‌ ಸ್ಥಾಪಿಸಿದೆ. ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇದು ತುಂಬಾ ಸಹಕಾರಿಯಾಗಲಿದೆ ಎಂದರು.

ಶತಮಾನಗಳಿಂದ ಸಮುದಾಯದ ಜನ ಶ್ರಮದಿಂದ ಬದುಕು ಕಟ್ಟುಕೊಂಡಿದ್ದಾರೆ. ಸಧ್ಯ ಬಡ ಹಡಪದ ಸಮುದಾಯದ ಮಕ್ಕಳ ಶೈಕ್ಷಣಿಕ ಹಾಗೂ ಸಮಾಜಿಕ ಅಭಿವೃದ್ಧಿಗೆ ಹಡಪದ ಅಭಿವೃದ್ಧಿ ನಿಗಮ ಸಹಕಾರಿಯಾಗಲಿದೆ. ನಮ್ಮ ಭೇಡಿಕೆ ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹಡಪದ ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷಾದ ಬಸವರಾಜ ಹಡಪದ, ಸುರೇಶ್ ಹಡಪದ, ನಾಗಪ್ಪ ಹಡಪದ, ಆನಂದ ಕುರಲಿ, ಸಿದ್ದಪ್ಪ ಹಡಪದ, ಸೋಮು ಹಡಪದ, ಬಸವರಾಜ ಹಡಪದ
ರಮೇಶ್ ಹಡಪದ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.

 

Advertisement

Leave a reply

Your email address will not be published. Required fields are marked *