ಆರೋಗ್ಯಕರ್ ಜೀವನಕ್ಕೆ ನಿಯಮಿತ ತಪಾಸಣೆ ಅವಶ್ಯಕ: ಕೆ.ಎಚ್.ಪಿ.ಟಿ ಜಿಲ್ಲಾ ಸಂಯೋಜಕ ವಸಂತ ಅಭಿಮತ
ಬೆಳಾವಿ : ವಿಶ್ವ ಕ್ಷಯ ರೋಗ ದಿನಾಚಾರಣೆ ನಿಮಿತ್ಯ ಮಾರ್ಚ್ 24 ರಂದು ಗುಜನಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಆಧುನಿಕ ಜೀವನ ಶೈಲಿಯಲ್ಲಿ ಮಾನವರು ಆರೋಗ್ಯಕರ ಜೀವನ ಶೈಲಿ ಹೊಂದುವುದು ಅತ್ಯವಶ್ಯಕವಾಗಿದೆ .ದಿನ ನಿತ್ಯ ವ್ಯಾಯಾಮ ಯೋಗಾಸನ ರೂಡಿಸಿಕೊಳ್ಳಬೇಕು ಎಂದು ಕೆ.ಎಚ್.ಪಿ.ಟಿ ಜಿಲ್ಲಾ ಸಂಯೋಜನಕಾರರಾದ ವಸಂತ ಅವರು ಮಾತನಾಡಿದರು.
ಈ ಶಿಬಿರದಲ್ಲಿ ಗುಜನಾಳ ಗ್ರಾಮದ ಸಮಸ್ತ ಗ್ರಾಮಸ್ತರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಮಾಡಿಕೊಂಡರು.
ಶಿಬಿರದಲ್ಲಿ ಗುಜನಾಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೆ.ಎಲ್.ಇ ವೈದ್ಯಾಧಿಕಾರಿಗಳು ಗ್ರಾಮದ ಸ್ವಯಂ ಸೇವಕರು ಉಪಸ್ಥಿತರಿದ್ದರು.