ಸವದತ್ತಿ ಬಿಜೆಪಿ ಟಿಕೆಟ್ ಸಿಗುವ ಬರವಸೆ ಇದೆ : ಬಸವರಾಜ ಪಟ್ಟಣಶೆಟ್ಟಿ
ಬೆಳಗಾವಿ : ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಬಸವರಾಜ ಪಟ್ಟಣಶೆಟ್ಟಿ ಹೇಳಿದರು.
ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹೈ ಕಮಾಂಡ್ ಈಗಾಗಲೇ ಕುಟುಂಬ ರಾಜಕೀಯಕ್ಕೆ ಮಣೆ ಹಾಕುವುದಿಲ್ಲ ಎಂದು ನಾಯಕರು ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಆದ್ದರಿಂದ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಕಳೆದ 8 ವರ್ಷಗಳಿಂದ ಸವದತ್ತಿಯಲ್ಲಿ ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಮಹಿಳೆಯರು, ಯುವಕರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಪಕ್ಷದ ವರಿಷ್ಠರಿಗೆ ನನ್ನ ಕೆಲಸದ ಬಗ್ಗೆ ಮನವರಿಕೆಯಾಗಿದೆ. ಅಲ್ಲದೆ, ನನ್ನ ಸೇರಿ 8 ಜನ ಬಿಜೆಪಿ ಆಕಾಂಕ್ಷಿಗಳಿದ್ದಾರೆ. ಹೊಸ ಮುಖಕ್ಕೆ ಈ ಬಾರಿ ಪಕ್ಷ ಮಣೆ ಹಾಕುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಮಹಾಂತೇಶ ಹಾದಿಮನಿ, ಸುನೀಲ ಕೆಳಗಡೆ, ಸಿ.ಎನ್.ಕುಲಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.