
ಡಿ ಕೆ ಸುರೇಶ್, ಸಿ ಪಿ ಯೋಗೇಶ್ವರ್ ಇದ್ದ ಬೋಟ್ ಪಲ್ಟಿ

ರಾಮನಗರ : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಮತದಾರರಿಗೆ ಧನ್ಯವಾದ ತಿಳಿಸಲು ಭಾನುವಾರ ಕೃತಜ್ಞತಾ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಮತದಾರರಿಗೆ ಕೃತಜ್ಞತಾ ಸಮಾವೇಶ ಮುಗಿದ ಬಳಿಕ ಕಾಂಗ್ರೆಸ್ ನಾಯಕರು ಚನ್ನಪಟ್ಟಣ ತಾಲೂಕಿನಲ್ಲಿರುವ ಕಣ್ವ ಜಲಾಶಯಕ್ಕೆ ಭೇಟಿ ನೀಡಿದರು. ಕಣ್ವ ಜಲಾಶಯದ ಸೌಂದರ್ಯ ನೋಡಿದ ನಾಯಕರು ಜಾಲಿ ರೈಡ್ ಮಾಡಿದರು.
ವಾಟರ್ ಬೈಕ್‌ನಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಅವರು ಡಿ.ಕೆ.ಸುರೇಶ್ ಅವರನ್ನ ಗಟ್ಟಿಯಾಗಿ ಹಿಡಿದು ಕೂತಿದ್ದರು. ವಾಟರ್ ಬೈಕ್ ರೈಡ್ ವೇಳೆ ಡಿ.ಕೆ ಸುರೇಶ್, ಸಿಪಿವೈ ಇಬ್ಬರು ಆಯತಪ್ಪಿ ನೀರಿಗೆ ಬಿದ್ದರು. ಕಣ್ವ ಜಲಾಶಯದಲ್ಲಿ ಬೋಟಿಂಗ್ ಮಾಡ್ತಿದ್ದ ವೇಳೆ ಆಯತಪ್ಪಿ ಇಬ್ಬರು ನೀರಿಗೆ ಬಿದ್ದಿದ್ದಾರೆ.
ಒಂದೇ ವಾಟರ್ ಬೈಕ್‌ನಲ್ಲಿ ನಾಯಕರು ರೈಡ್ ಮಾಡಿದ್ದರು. ಈ ವೇಳೆ ಆಯತಪ್ಪಿ ವಾಟರ್ ಬೈಕ್‌ನಿಂದ ಇಬ್ಬರು ಕೆಳಗೆ ಬಿದ್ದು ಬಳಿಕ ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಸೇಫ್ಟಿ ಜಾಕೆಟ್ ಹಾಗೂ ದಡದ ಸಮೀಪವೇ ಡಿ.ಕೆ ಸುರೇಶ್, ಸಿಪಿವೈ ನೀರಿಗೆ ಬಿದ್ದಿದ್ದರಿಂದ ಯಾರು ಹೆದರುವ ಪ್ರಮೇಯವೇ ಬರಲಿಲ್ಲ.