ಹಿರಿಯ ನಟ ಎಸ್. ಶಿವರಾಮ ನಿಧನಕ್ಕೆ ಹುಕ್ಕೇರಿ ಶ್ರೀ ಸಂತಾಪ
ಬೆಳಗಾವಿ : ಕನ್ನಡ ಚಿತ್ರರಂಗದ ಖ್ಯಾತ ಮೇರು ನಟ ಸಾವಿರಾರು ಚಿತ್ರಗಳಲ್ಲಿ ನಟನೆ ಮಾಡಿ ಆದರ್ಶ ನಟರಾಗಿದ್ದರು ಅನೇಕ ಯುವ ಕಲಾವಿದರಿಗೆ ಮಾರ್ಗದರ್ಶನ ನಿಡುತಿದ್ದರು ಅವರ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂತಾಪದ ನುಡಿಗಳನಾಡಿದರು.
ಶಿವರಾಮರವರು ಹುಕ್ಕೇರಿ ಹಿರೇಮಠದ ಜೊತೆಗೆ
ಅವಿನಾಭಾವ ಸಂಭಂದವನ್ನಿಟ್ಟ ನಟರು. ಹಲವಾರು ಬಾರಿ ಶ್ರೀ ಮಠಕ್ಕೆ ಭೇಟಿ ನೀಡಿದ್ದರು. ಬಡವರಿಗೆ ಹಾಗೂ ಸಂಕಷ್ಟದಲ್ಲಿದ್ದವರೆ ಸಹಾಯ ಮಾಡುತ್ತಿದ್ದ ಇವರ ಸಾವು ನಮಗೆ ನೋವು ತರಿಸಿದೆ ಎಂದರು.