
ಕುಂಭಮೇಳದಲ್ಲಿ “ಸಾಹುಕಾರ್ ಸಿಎಂ” ಘೋಷಣೆ ಝೇಂಕಾರ

ಬೆಳಗಾವಿ : ತಮ್ಮ ನೆಚ್ಚಿನ ನಾಯಕ ರಾಜಕೀಯವಾಗಿ ಮಹತ್ವದ ಹುದ್ದೆ ಅಲಂಕರಿಸಲಿ ಎಂಬ ಇಚ್ಛೆ ಅವರ ಅಭಿಮಾನಿಗಳಿಗೆ ಇರುವುದು ಸಹಜ, ಇದೇ ರೀತಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.
ಹೌದು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಪವಿತ್ರ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಸಿಎಂ ಹುದ್ದೆ ಅಲಂಕರಿಸಲಿ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಸತೀಶ್ ಜಾರಕಿಹೊಳ ಅವರ ಪೋಟೋ ಹಿಡಿದಿರುವ ಅಭಿಮಾನಿಗಳು ಮುಂದಿನ ಸಿಎಂ ಎಂದು ಘೋಷಣೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಶಿವನಲ್ಲಿ ಬೇಡಿಕೊಂಡಿರುವ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.