Select Page

Advertisement

ಪಾಕಿಸ್ತಾನದ ವಿರುದ್ಧ ಕಣಕ್ಕೆ ಇಳಿಯುತ್ತಾರಾ ಶುಭ್ ಮನ್ ಗಿಲ್…..?

ಪಾಕಿಸ್ತಾನದ ವಿರುದ್ಧ ಕಣಕ್ಕೆ ಇಳಿಯುತ್ತಾರಾ ಶುಭ್ ಮನ್ ಗಿಲ್…..?

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಶುಭ್ ಮನ್ ಗಿಲ್ (Shubman gill ) ಡೆಂಘಿ ಜ್ವರದಿಂದ ಕಳೆದ ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದರು.

ಸಧ್ಯ ಗಿಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು 99 % ಫಿಟ್ ಆಗಿದ್ದಾರೆ ಎಂದು ತಂಡದ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ. ಕಳೆದ ಎರಡು ಪಂದ್ಯದಲ್ಲಿ ಗಿಲ್ ಅವರನ್ನು ಮಿಸ್ ಮಾಡಿಕೊಂಡಿದ್ದ ಭಾರತ ತಂಡಕ್ಕೆ ಗಿಲ್ ಆಗಮನದಿಂದ ಮತ್ತಷ್ಟು ಬಲ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ( India vs Pakistan )

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿಲ್ ಅವರು, ನಂತರ ಅಹಮದಾಬಾದ್ ಗೆ ತೆರಳಿ ಭರ್ಜರಿ ಅಭ್ಯಾಸ ನಡೆಸಿದ್ದರು. ಸಧ್ಯ ಅವರ ಆರೋಗ್ಯ ಸಂಪೂರ್ಣವಾಗಿ ಚೇತರಿಕೆ ಆಗಿದ್ದು ಗಿಲ್ ಇವತ್ತು ಕಣಕ್ಕೆ ಇಳಿಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ಇತಿಹಾಸವೇ ಇಲ್ಲ –

ಭಾರತ ಮತ್ತು ಪಾಕಿಸ್ತಾನ ಈವರೆಗಿನ ವಿಶ್ವಕಪ್ ನಲ್ಲಿ ಏಳು ಬಾರಿ ಮುಖಾಮುಖಿ ಆಗಿವೆ. ಎರಡು ತಂಡಗಳ ನಡುವಿನ ವೈರತ್ವ ಇದು ಇಂದು ನಿನ್ನೆಯದಲ್ಲ. ಸುಮಾರು ದಶಕಗಳಿಂದಲೂ ವೈರಿಗಳ ವಿರುದ್ಧ ಭಾರತದ ಕಾಳಗ ಇದ್ದೇ ಇದೆ.

1992 ರಿಂದ ಈವರೆಗೆ ಭಾರತ ಮತ್ತು ಪಾಕಿಸ್ತಾನ ಏಳು ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಏಳು ಪಂಧ್ಯಗಳನ್ನು ಭಾರತ ಗೆದ್ದಿದ್ದು, ವಿರೋಧಿ ತಂಡ ಪಾಕಿಸ್ತಾನಕ್ಕೆ ಗೆಲ್ಲಲು ಒಂದು ಸಣ್ಣ ಅವಕಾಶವನ್ನು ಭಾರತ ಕೊಟ್ಟಿಲ್ಲ. ಈ ಕಸರಣಗಳಿಂದಲೇ ಭಾರತ ವಿಶ್ವಕಪ್ ನಲ್ಲಿ ಅತ್ಯಂತ ಯಶಸ್ವಿ ತಂಡ ಎಂದೇ ಖ್ಯಾತಿ ಪಡೆದುಕೊಂಡಿದೆ‌‌‌.

1992 ರಲ್ಲಿ ಸಿಡ್ನಿ ಯಲ್ಲಿ ನಡೆದ ಪಂದ್ಯದಲ್ಲಿ ಭಾರತ 43 ರನ್ ಗಳ ಜಯ ಸಾಧಿಸಿದೆ. ನಂತರ 1996 ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 39 ರನ್ ಗಳಿಂದ ಜಯ ಸಾಧಿಸಿದೆ.

1999 ರಲ್ಲಿ ಮ್ಯಾಂಚೆಸ್ಟರ್‌ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ 47 ರನ್ ಗಳಿಂದ ಜಯ ಸಾಧಿಸಿತ್ತು. ನಂತರ 2003 ರಲ್ಲಿ ಸೆಂಚೂರಿಯನ್ ನಲ್ಲಿ 6 ವಿಕೆಟ್ ಗಳಿಂದ ಜಯ ಸಾಧಿಸುವ ಮೂಲಕ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತ್ತು ಭಾರತ‌.

2011 ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 29 ರನ್ ಗಳಿಂದ ಗೆಲುವು ಸಾಧಿಸಿತ್ತು. ಇದೇ ವಿಶ್ವಕಪ್ ನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಇತಿಹಾಸ. ನಂತರ 2015 ಮತ್ತು 2019 ರಲ್ಲಿ ಎರಡೂ ಪಂದ್ಯದಲ್ಲಿ 70 ಕ್ಕೂ ಅಧಿಕ ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತ ಈವರೆಗೂ ಪಾಕ್ ವಿರುದ್ಧ ಸೋತಿಲ್ಲ‌.

Advertisement

Leave a reply

Your email address will not be published. Required fields are marked *

error: Content is protected !!