ಶೂಟಿಂಗ್ ಚಾಂಪಿಯನ್‌ಶಿಫ್ ನಲ್ಲಿ ಜೋಡಿ ಪದಕ ಗೆದ್ದು ಸಾಧನೆಗೈದ ಆಕಾಶ ಗುಡಗೇನಟ್ಟಿ
ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ ವಿದ್ಯಾರ್ಥಿ ಹಾಗೂ ಎನ್‌ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಆಕಾಶ ಸತೀಶ್ ಗುಡಗೇನಟ್ಟಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್ ನಲ್ಲಿ ಜೋಡಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಶನಿವಾರ ಕೇರಳದ ತಿರುವನಂತಪುರಂನಲ್ಲಿ ಜರುಗಿದ 33ನೇ ಜಿ.ವಿ ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್ ಹಾಗೂ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಶೂಟಿಂಗ್ ವಿಭಾಗದಲ್ಲಿ ಆಕಾಶ ಸತೀಶ್ ಗುಡಗೇನಟ್ಟಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಗೆದ್ದು ಸಾಧನೆಗೈದಿದ್ದಾರೆ.
ದೇಶಾದ್ಯಂತ 18 ಯುವ ಶೂಟರ್‌ಗಳು ಕ್ರೀಡಾಕೂಟದ ಅಂತಿಮ ಹಂತದ ಸ್ಪರ್ಧಿಸಿದ್ದರು. ಅಭೂತಪೂರ್ವ ಕೌಶಲ್ಯ ತೋರಿ ಚಿನ್ನದ ಪದಕ ಗೆಲ್ಲುವಲ್ಲಿ ಆಕಾಶ್ ಯಶಸ್ವಿಯಾಗಿದ್ದಾರೆ.
26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿರುವ ಆಕಾಶ್, ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಫ್‌ದ ಜೂನಿಯರ್ ಹಾಗೂ ಸೀನಿಯರ್ ಎರಡು ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ರಾಜ್ಯದ ಪ್ರಥಮ ಎನ್‌ಸಿಸಿ ಕೆಡೆಟ್ ಎಂಬ ಖ್ಯಾತಿ ಗಳಿಸಿದ್ದಾರೆ.
ವಿದ್ಯಾರ್ಥಿ ಆಕಾಶ್ ಅವರ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸುನೀಲ ದಾಗರ.
ಎಡಮ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸಿದ್ದಾರ್ಥ ರೆಡೂ ಶಂಕರ ಯಾದವ್, ಸುಬೇದಾರ್ ಮೇಜರ್ ಕಲ್ಲಪ್ಪಾ ಪಾಟೀಲ, ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ್ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿವರ್ಗದವರು ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.