ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಖುಷಿ ಏಕನಾಥ ಅಗಸಿಮನಿ
ಬೆಳಗಾವಿ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 40ನೇ ಕರ್ನಾಟಕ ಸೆಲೆಕ್ಷನ್ ಟ್ರಯಲ್ ನಲ್ಲಿ ಫ್ರೀ ಸ್ಟೈಲ್ ಮತ್ತು ಸೋಲೋ ಆರ್ಟಿಸ್ಟಿಕ್ ಸ್ಕೇಟಿಂಗ್ ನಲ್ಲಿ ಬೆಳಗಾವಿ ಆರ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಖುಷಿ ಏಕನಾಥ ಅಗಸಿಮನಿ ಅವರು ತಲಾ ಒಂದೊಂದು ಚಿನ್ನ ಹಾಗೂ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಬೆಳಗಾವಿ ಸ್ಕೇಟಿಂಗ್ ತರುಬೇತುದಾರ ಸೂರ್ಯಕಾಂತ ಹಿಂಡಲಗೇಕರ್, ವಿಠ್ಠಲ ಗಗನರ ಅವರ ಮಾರ್ಗದರ್ಶನದಲ್ಲಿ ಖುಷಿ ಅವರು ಸಾಧನೆ ಮಾಡಿದ್ದಾರೆ. ಖುಷಿಯ ಅವರ ಈ ಸಾಧನೆಗೆ ಆರ್ಮಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಖುಷಿ ಅಗಸಿಮನಿ ಅವರು ಪ್ರಜಾವಾಣಿ ಛಾಯಾಗ್ರಾಹಕ ಏಕನಾಥ ಅಗಸಿಮನಿ ಪುತ್ರಿಯಾಗಿದ್ದು, ಪುತ್ರಿಯ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.