
ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಬೆತ್ತಲೆಯಾಗಿ ಓಡಾಡುವೆ ಎಂದ ನಟಿ

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ತಂಡ ಗೆದ್ದರೆ ವಿಶಾಖಪಟ್ಟಣಂ ಬೀಚ್ ನಲ್ಲಿ ಬೆತ್ತಲೆಯಾಗಿ ಓಡುವುದಾಗಿ ತೆಲುಗಿನ ನಟಿಯೊಬ್ಬರು ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದ್ದಾರೆ.
ನಟಿ ರೇಖಾ ಬೊಜ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ರೀತಿಯ ಟ್ವೀಟ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಟ್ವೀಟಿಗೆ ನಾನಾ ರೀತಿಯಲ್ಲಿ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ.
12 ವರ್ಷಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ, ಇಂತಹುದೇ ಹೇಳಿಕೆ ನೀಡುವ ಮೂಲಕ ಪ್ರಸಿದ್ಧಿಯಾಗಿದ್ದರು. ಭಾರತ ತಂಡ ವಿಶ್ವಕಪ್ ಗೆದ್ದರೆ ಮುಂಬೈ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಹೇಳಿ ಪ್ರಚಾರ ಪಡೆದಿದ್ದರು. ಇದೀಗ ಅದೇ ರೀತಿಯಲ್ಲಿ ರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪೈನಲ್ ಪಂದ್ಯಾವಳಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಧ್ಯಕ್ಕೆ ಪೈನಲ್ ಗೆಲ್ಲುವುದು ಭಾರತ ಎಂಬುದು ಕ್ರಿಕೆಟ್ ಅಭಿಮಾನಿಗಳ ವಾದವಾಗಿದೆ.