
1983 ರ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಭಾರತದ ಸ್ಕೋರ್ ಕಾರ್ಡ್ ಹೇಗಿತ್ತು ಗೊತ್ತಾ….?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 1983 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಪೈನಲ್ ಪಂದ್ಯಾವಳಿ ನಡೆದಿತ್ತು. ಅಂದಿನ ಶ್ರೇಷ್ಠ ತಂಡಗಳಲ್ಲಿ ಒಂದಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸುವ ಮೂಲಕ ಮೊದಲಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದಿದ್ದರು.
ಭಾರತ ತಂಡವನ್ನು ಕಪಿಲ್ ದೇವ್ ಅವರು ಆ ಸಂದರ್ಭದಲ್ಲಿ ಮುನ್ನಡೆಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ 183 ರನ್ ಗುರಿ ನೀಡಿತ್ತು. ಈ ಸಂದರ್ಭದಲ್ಲಿ ಭಾರತದ ಪರ ಕ್ರಿಸ್ ಶ್ರೀಕಾಂತ್ 57 ಬಾಲ್ ಗೆ 38 ರನ್ ಹೊಡೆದಿದ್ದೇ ಅತಿ ಹೆಚ್ಚು ವೈಯಕ್ತಿಕ ರನ್ ಹೊಡೆದಿದ್ದ ಆಟಗಾರ ಇವರಾಗಿದ್ದರು.
ಬೌಲಿಂಗ್ ವಿಭಾಗದಲ್ಲಿ ಕಮಾಲ್ ಮಾಡಿದ್ದ ಭಾರತದ ಪರ ಮದನ್ ಲಾಲ್ ಹಾಗೂ ಮೋಹಿಂದರ್ ಅಮರನಾಥ ಇಬ್ಬರೂ ತಲಾ ಮೂರು ವಿಕೆಟ್ ಪಡೆಯುವ ಮೂಲಕ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. ಕಪಿಲ್ ದೇವ್ ಹಾಗೂ ರೋಜರ್ ಬೆನ್ನಿ ಸೇರಿದಂತೆ ಇನ್ನುಳಿದ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದ್ದರು.
ಭಾರತದ ಪರ ಸುನಿಲ್ ಗವಾಸ್ಕರ್ ಪೈನಲ್ ಪಂದ್ಯದಲ್ಲಿ ಕೇವಲ ಎರಡು ರನ್ ಹೊಡೆದಿದ್ದರು. ಮೋಹಿಂದರ್ ಅಮರನಾಥ, ಯಶಪಾಲ್ ಶರ್ಮಾ, ಸಂದೀಪ್ ಪಟೀಲ್, ಕಪಿಲ್ ದೇವ್, ಕೀರ್ತಿ ಅಜಾದ್ ಕೂಡಾ ತಮ್ಮ ಶ್ರಮ ಹಾಕಿ ಭಾರತದ ಗೆಲುವಿಗೆ ಸಹಕಾರಿಯಾಗಿದ್ದರು.

