ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲ್ಲಲು ಈ ವ್ಯಕ್ತಿ ಕಾರಣ ; ರೋಹಿತ್ ಕೊಂಡಾಡಿದ್ದು ಯಾರನ್ನ…..?
ನವದೆಹಲಿ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಿರಂತರ ಐದು ಪಂದ್ಯ ಗೆಲ್ಲುವ ಮೂಲಕ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ನ್ಯೂಜಿಲೆಂಡ್ ತಂಡದವನ್ನು ಆರಂಭದಲ್ಲೇ ಕಟ್ಟಿಹಾಕಲು ಯಶಸ್ವಿಯಾಗಿತ್ತು. ಈ ವಿಶ್ವಕಪ್ ನಲ್ಲಿ ಮೊದಲ ಪಂದ್ಯ ಆಡಿದ ಮೊಹಮ್ಮದ್ ಶಮಿ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದರು.
50 ಓವರ್ ನಲ್ಲಿ ನ್ಯೂಜಿಲೆಂಡ್ ತನ್ನೆಲ್ಲ ವಿಕೆಟ್ ಕಳೆದುಕೊಂಡು 273 ರನ್ ಗಳಿಸಲು ಶಕ್ತವಾಯಿತು. ಕೀವಿಸ್ ಪರ ರಚಿನ್ ರವೀಂದ್ರ ( 75 ) ಮತ್ತು ಡ್ಯಾರಿಲ್ ಮಿಚೆಲ್ ( 130 ) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು.
ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿತು. ನಂತರ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ Rohith Sharma. ಈ ಪಂದ್ಯದ ಗೆಲುವಿನ ಶ್ರೇಯವನ್ನು ಮೊಹಮ್ಮದ್ ಶಮಿ ಅವರಿಗೆ ಅರ್ಪಿಸಿದರು.
ತುಂಬಾ ಕಠಿಣವಾದ ಕ್ರೀಡಾಂಗಣದಲ್ಲಿ ಕೀವಿಸ್ ಉತ್ತಮ ಬ್ಯಾಟಿಂಗ್ ನಡೆಸಿತ್ತು. ಆದರೆ ಶಮಿ ಉತ್ತಮ ದಾಳಿಯಿಂದ 273 ರನ್ ಟಾರ್ಗೆಟ್ ನಮಗೆ ಸಿಕ್ಕಿತ್ತು. ಒಂದುವೇಳೆ ಮುನ್ನೂರು ಗಡಿ ದಾಟಿದ್ದರೆ ತುಂಬಾ ಕಷ್ಟವಾಗುತ್ತಿತ್ತು ಎಂದಿದ್ದಾರೆ.
ಅಷ್ಟೇ ಅಲ್ಲದೆ. ವಿರಾಟ್ ಕೊಹ್ಲಿ ಹಾಗೂ ಜಡೇಜಾ ಅವರ ಜೊತೆಯಾಟವನ್ನು ಸ್ಮರಿಸಿದ ನಾಯಕ ರೋಹಿತ್ ಶರ್ಮಾ. ವಿರಾಟ್ ಬ್ಯಾಟಿಂಗ್ ಅನ್ನು ಕೊಂಡಾಡಿದ್ದಾರೆ. ICC world Cup