ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ! ಮನೆಯಿಂದ ಬಂಧಿಸಿ ಕರೆದೊಯ್ದ ಪೊಲೀಸ್
ಬೆಂಗಳೂರು : ಬಿಗ್ ಬಾಸ್ ಕನ್ನಡದ ಸ್ಪರ್ಧಿಯಾಗಿದ್ದ ರೈತ ವರ್ತೂರು ಸಂತೋಷ್ ಅವರನ್ನು ಬಂಧಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈತುಂಬ ಬಂಗಾರದ ಆಭರಣ ಹಾಕಿಕೊಂಡು ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಸಂತೋಷ್ ಅವರಿಗೆ ಅವರದೇ ಆಭರಣ ಮುಳುವಾಗಿದೆ. ಕುತ್ತಿಗೆಯಲ್ಲಿ ಧರಿಸಿದ್ದ ಆಭರಣವೇ ಅವರಿಗೆ ಮುಳುವಾಗಿದೆ.
ಕುತ್ತಿಗೆಯಲ್ಲಿ ಧರಿಸಿದ್ದ ಚೈನ್ ನಲ್ಲಿ ಹುಲಿ ಉಂಗುರ ಬಳಸಿದ್ದು ಸಧ್ಯ ವರ್ತೂರು ಅವರಿಗೆ ಸಂಕಷ್ಟ ತಂದಿದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಹುಲಿ ಉಂಗುರು ಬಳಸುವುದು ಕಾನೂನು ಪ್ರಕಾರ ಅಪರಾಧ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
ರಾಮೋಹಳ್ಳಿ ಅರಣ್ಯ ಅಧಿಕಾರಿಗಳು ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಭಾನುವಾರ ರಾತ್ರಿ ರಾಜರಾಜೇಶ್ವರಿ ನಗರದಲ್ಲಿರುವ ಬಿಗ್ ಬಾಸ್ ಮನೆಗೆ ತೆರಳಿ ಸಂತೋಷ್ ಅವರನ್ನು ಬಂಧಿಸಿದ್ದಾರೆ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಕಾನೂನು ಅಡಿಯಲ್ಲಿ ಸಂತೋಷ್ ಅವರನ್ನು ಬಂಧಿಸಲಾಗಿದೆ. ಸಂತೋಷ್ ಅವರು ಧರಿಸಿದ್ದ ಆಭರಣಗಳನ್ನು ಗಮನಿಯೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.