Select Page

Lawrence Bishnoi – ಸಲ್ಮಾನ್ ಖಾನ್ ಹತ್ಯೆ ನಮ್ಮ ಗುರಿ : ಲಾರೆನ್ಸ್‌ ಬಿಷ್ಣೋಯ್ ಸೇಡಿಗೆ ಏನು ಕಾರಣ

Lawrence Bishnoi – ಸಲ್ಮಾನ್ ಖಾನ್ ಹತ್ಯೆ ನಮ್ಮ ಗುರಿ : ಲಾರೆನ್ಸ್‌ ಬಿಷ್ಣೋಯ್ ಸೇಡಿಗೆ ಏನು ಕಾರಣ

ಸಧ್ಯ ದೇಶಾದ್ಯಂತ ಲಾರೆನ್ಸ್ ಬಿಷ್ಣೋಯ್ ( Lawrence Bishnoi ) ಈ‌ ಒಂದು ಹೆಸರು ಹೆಚ್ಚು ಸದ್ದು ಮಾಡುತ್ತಿದೆ. ಬಾಲಿವುಡ್ ನ ಖ್ಯಾತ ಕಲಾವಿದ ಸಲ್ಮಾನ್ ಖಾನ್ ( Salman Khan ) ಹತ್ಯೆ ಮಾಡುವುದೇ ನಮ್ಮ ಮೂಲ ಧ್ಯೇಯ, “ಕಾನೂನು ಬಿಟ್ಟರು ನಾನು ಬಿಡುವುದಿಲ್ಲ” ಎಂದು ಬೆದರಿಕೆ ಹಾಕುವ ಯುವಕನೇ ಲಾರೆನ್ಸ್ ಬಿಷ್ಣೋಯ್.

ಹೌದು ಪೆಬ್ರವರಿ 12, 1993 ರಲ್ಲಿ ಪಂಜಾಬ್ ( Punjab ) ನ ಫಿರೋಜ್ ಪುರದ ಅಬೋಹರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಸಿದ ಯುವಕ ಕಾನೂನು ಪದವಿ ಪಡೆದುಕೊಂಡಿದ್ದಾನೆ. ಕಾಲೇಜು ಅಧ್ಯಯನ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಚುನಾವಣೆ ಕಡೆ ಗಮನಹರಿಸಿದ್ದ.

ಪ್ರತಿಷ್ಠೆಯಾಗಿದ್ದ ಕಾಲೇಜು ಚುನಾವಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ತನ್ನನ್ನು ಅತಿಯಾಗಿ ತೊಡಗಿಸಿಕೊಂಡನು. ಈ ಸಂದರ್ಭದಲ್ಲಿ ನಡೆದ ಹೊಡೆದಾಗ ಗಂಭೀರ ಸ್ವರೂಪ ಪಡೆದು ನಿಧಾನವಾಗಿ ಅಪರಾಧ ಜಗತ್ತಿನತ್ತ ವಾಲಿದನು. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯೇ ಲಾರೆನ್ಸ್ ಈ ರೀತಿಯಲ್ಲಿ ಅಪರಾಧ ಜಗತ್ತಿನಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂಬ ವಾದವೂ ಇದೆ.

ಆದರೆ 2011 ಹಾಗೂ 12 ರ ಸಂದರ್ಭದಲ್ಲಿ ಲಾರೆನ್ಸ್ ಬಿಷ್ಣೋಯ್ ದರೋಡೆ, ಕೊಲೆ ಸೇರಿದಂತೆ ಕೆಲ ಪ್ರಕರಣಕ್ಕೆ ಸಿಲುಕಿ ಜೈಲು ಕಂಬಿ ಎಣಿಸಬೇಕಾದ ಪರಿಸ್ಥಿತಿ ಬಂದಿದೆ. ಇದೇ ಸಂದರ್ಭದಲ್ಲಿ ಜೈಲಿನಲ್ಲಿ ಕುಖ್ಯಾತ ರೌಡಿಗಳ ಪರಿಚಯವಾದ ಹಿನ್ನಲೆಯಲ್ಲಿ ಬಿಷ್ಣೋಯ್ ಇನ್ನಷ್ಟು ಅಪರಾಧ ಕಾರ್ಯದಲ್ಲಿ ತೊಡಗಿಳೊಳ್ಳುವಂತಾಗಿದೆ.

ಸಲ್ಮಾನ್ ಮೇಲೆ ಯಾಕಿಷ್ಟು ಸಿಟ್ಟು….? ಸಮಾನ್ಯವಾಗಿ ಬಿಷ್ಣೋಯ್ ಸಮುದಾಯ ಅತ್ಯಂತ ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸುವ ಸಮುದಾಯ. ಈ ಸಮುದಾಯದ ಜನ ಪ್ರಕೃತಿ ಆರಾಧನೆ ಜಾಸ್ತಿ ಮಾಡುತ್ತಾರೆ ಹಾಗೆಯೆ ಕೃಷ್ಣಮೃಗವನ್ನು ದೇವರ ರೂಪದಲ್ಲಿ ನೋಡುವ ಸಮುದಾಯ.

ಆದರೆ 1998 ರಲ್ಲಿ ರಾಜಸ್ಥಾನದಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ , ಬಾಲಿವುಡ್ ನಟ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿ ಅದನ್ನು ಕೊಂದಿದ್ದರು. ನಂತರ ಕೋಟ್೯ ನಲ್ಲಿಯೂ ಈ ಕುರಿತು ಸಲ್ಮಾನ್ ತಪ್ಪು ಮಾಡಿದ್ದರ ಕುರಿತು ಸಾಕ್ಷಿಗಳು ಇದ್ದವು.
ಆದರೆ ಕೃಷ್ಣಮೃಗ ಪ್ರಾಣಿಯನ್ನು ಪೂಜಿಸುವ ಬಿಷ್ಣೋಯ್ ಸಮುದಾಯವನ್ನು ಕೆರಳಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ನಾನು ಪ್ರಕರಣವನ್ನು ಕೋಟ್೯ ಮೂಲಕವೇ ಬಗೆಹರಿಸುಕೊಳ್ಳುವೆ ಎಂದು ಹೇಳುತ್ತಾರೆ. ಆದರೆ ಸಲ್ಮಾನ್ ನಡೆಯಿಂದ ಆಕ್ರೋಶಗೊಂಡಿರುವ ಬಿಷ್ಣೋಯ್ ಸಮುದಾಯದ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಹತ್ಯೆ ಮಾಡುವುದಾಗಿ ಆಗಾಗ್ಗೆ ಹೇಳಿಕೆ‌ ನೀಡುತ್ತಾನೆ.

ಸಧ್ಯ ಲಾರೆನ್ಸ್ ಬಿಷ್ಣೋಯ್ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಮಟ್ಟಿಗೆ ಭೂಗತ ಲೋಕದಲ್ಲಿ ಬೆಳೆದು ನಿಂತಿದ್ದಾನೆ. ಜೈಲಿನಲ್ಲೇ ಇದ್ದು ಇಡೀ ಅಪರಾಧ ಜಗತ್ತು ನಡುಗಿಸುವ ಶಕ್ತಿ ಈ ಲಾರೆನ್ಸ್ ಬಿಷ್ಣೋಯ್ ಗೆ ಇದೆ. ಈ ಹಿನ್ನಲೆಯಲ್ಲಿ ಸಧ್ಯ ಅನೇಕ ಹತ್ಯೆಗಳು ಇದಕ್ಕೆ ಮತ್ತಷ್ಟು ಬಲ ನೀಡುತ್ತಿವೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಲ್ಲಿ ಸುಮಾರು 700 ಜನ ಶಾರ್ಪ್ ಶೂಟರ್ ಗಳು ಇದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಸೇನೆಗಳು ಬಳಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ಲಾರೆನ್ಸ್ ಬಿಷ್ಣೋಯ್ ಗುಂಪು ಹೊಂದಿದೆ‌‌‌. ಇವರು ಇಟ್ಟ ಗುರಿ ಈವರೆಗೆ ತಪ್ಪಿಲ್ಲ. ಹಾಗೆಯೆ ಅನೇಕರನ್ನು ಈ ಗ್ಯಾಂಗ್ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.

ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಪರಮಾಪ್ತ ಗೆಳೆಯ ಗೋಲ್ಡಿ ಬ್ರಾರ್ ( Goldy Brar ) ಕೆಲವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪಂಜಾಬಿ ಖ್ಯಾತ ಗಾಯಕ ಸಿದ್ದು ಮೂಸೆವಾಲಾ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ಉಜ್ಜಾರ್ ಹತ್ಯೆ ಮಾಡಿದೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಎನ್ ಸಿ ಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯನ್ನು ಇದೇ ಗ್ಯಾಂಗ್ ಮಾಡಿದ್ದು ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!