ಕೃಷ್ಣ ಜನ್ಮಾಷ್ಟಮಿ : ಬಾಲ ಲೀಲೆಗಳಲ್ಲಿ ಕೃಷ್ಣ ರೂಪ
‘ಯಶೋದೆಯೇ ಅಮ್ಮ…
ನನ್ನನು ಎತ್ತಿ ಕೊಳ್ಳಮ್ಮ…’ಎಂದು ಕೃಷ್ಣ ಅಮ್ಮನಲ್ಲಿ ರಚ್ಚೆ ಹಿಡಿಯುವ ಸುಂದರ ಕ್ಷಣವನ್ನು ಪುರಂದರದಾಸರು ತಮ್ಮ ಪದ್ಯವೊಂದರಲ್ಲಿ ಕಟ್ಟಿ ಕೊಟ್ಟಿದ್ದಾರೆ. ಪುಟ್ಟ ಮಕ್ಕಳ ಒಂದು ಸಾಮಾನ್ಯ ಗುಣ ಎತ್ತಿಕೋ ಎಂದು ಅಮ್ಮನಲ್ಲಿ ದುಂಬಾಲು ಬೀಳುವುದು. ಸ್ನಾನ ಮಾಡಲು ಒಲ್ಲೆಯೆನ್ನುವುದು, ಊಟ-ತಿಂಡಿ ಬೇಡ ಎನ್ನುವುದು.. ಹೀಗೆ ಎಲ್ಲ ಮಕ್ಕಳಲ್ಲೂ ಕಾಣುವ ಬಾಲಲೀಲೆಗಳ ರೂಪವೇ ಕೃಷ್ಣನ ಅವತಾರಗಳ ಪ್ರತಿರೂಪ…!