Select Page

ರಾಮದುರ್ಗ – ಚಂದರಗಿ ಗ್ರಾಮದಲ್ಲಿ ಯುವಕರ ನಡುವೆ ಗುಂಪು ಘರ್ಷಣೆ, ವಿಡಿಯೋ ವೈರಲ್

ರಾಮದುರ್ಗ – ಚಂದರಗಿ ಗ್ರಾಮದಲ್ಲಿ ಯುವಕರ ನಡುವೆ ಗುಂಪು ಘರ್ಷಣೆ, ವಿಡಿಯೋ ವೈರಲ್

ರಾಮದುರ್ಗ‌ : ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಉಂಟಾಗಿ ಕಟ್ಟಿಗೆಯಿಂದ ಹೊಡೆದಾಡಿಕೊಂಡ ಘಟನೆ ತಾಲೂಕಿನ ಚಂದರಗಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ಚಂದರಗಿ ಕ್ರೀಡಾ ಶಾಲೆ ಆವರಣದಲ್ಲಿ ವಲಯ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚಂದರಗಿ ಹಾಗೂ ಕಟಕೋಳ ಶಾಲೆಯ ವಿದ್ಯಾರ್ಥಿಗಳ ನಡುವೆ ಕಬಡ್ಡಿ ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಸಂಯಮ ಕಳೆದುಕೊಂಡ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಒಂದು ಸಂದರ್ಭದಲ್ಲಿ ಯುವಕರ ಜಗಳ ವಿಕೋಪಕ್ಕೆ ತಿರುಗಿ ಕೈಗೆ ಸಿಕ್ಕ  ಕಟ್ಟಿಗೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಾಗೂ ಊರಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯುವಕರ ಮಧ್ಯೆ ಉಂಟಾದ ಸಣ್ಣ ಮನಸ್ಥಾಪ ಈ ಮಟ್ಟಿಗೆ ಬಂದು ನಿಂತಿದ್ದು ವಿಪರ್ಯಾಸ.

Advertisement

Leave a reply

Your email address will not be published. Required fields are marked *

error: Content is protected !!