Select Page

Advertisement

ಕೃಷ್ಣಾ ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಬೀದಿಗಿಳಿಯಲು ಕಾರಣ….?

ಕೃಷ್ಣಾ ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಬೀದಿಗಿಳಿಯಲು ಕಾರಣ….?

ಕಾರ್ಖಾನೆಯಲ್ಲಿ ನಡೆದಿದೆಯಾ ಬ್ರಹ್ಮಾಂಡ ಭ್ರಷ್ಟಾಚಾರ

ಇಲ್ಲಿ ಅಡಗಿದೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಕಠೋರ ಸತ್ಯ

ಅಥಣಿ : ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅದೆಷ್ಟೋ ರೈತ ಮಕ್ಕಳ ಬದುಕು ಬದಲಿಸಿದೆ. ಲಕ್ಷಾಂತರ  ಕೃಷ್ಣಾನದಿ ಪಾತ್ರದ ಕಬ್ಬು ಬೆಳೆಗಾರರು ಈ ಕಾರ್ಖಾನೆಯಿಂದ ಸುಂದರ ಬದುಕು ಕಟ್ಟಿಕೊಂಡರು.‌ ತಮ್ಮ ಬೆವರ ಹನಿಗಳಿಗೆ ಈ ಕಾರ್ಖಾನೆ ನ್ಯಾಯವನ್ನು ಓದಗಿಸಿದೆ. ಅಷ್ಟೇ ಅಲ್ಲದೆ ಅದೆಷ್ಟೋ ಖಾಸಗಿ ಕಾರ್ಖಾನೆಗಳ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಅನ್ನದಾತರು ತಲೆ ಎತ್ತಿ ನಡೆದಾಡುವಂತೆ ಮಾಡಿದ್ದು ಇದೇ ಕಾರ್ಖಾನೆ.

ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾನದಿ ಪಾತ್ರದ ಕರ್ಲಟ್ಟಿ ಗ್ರಾಮದಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲೇ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅನೇಕ ವರ್ಷಗಳ‌ಕಾಲ ರಾಜ್ಯದಲ್ಲೇ ಅತಿ ಹೆಚ್ಚು ರೈತರಿಗೆ ಕಬ್ಬಿನ ಬಿಲ್ ನೀಡಿದ್ದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ರಾಜ್ಯದ ಕಾರ್ಖಾನೆಗಳಿಗೂ ಸ್ಪರ್ಧಿಯಾಗಿದ್ದು ಇದೆ. ಇಷ್ಟೇಲ್ಲ ವಿಶೇಷತೆಗಳಿರುವ ಈ ಕಾರ್ಖಾನೆ ವಿರುದ್ಧ ರೈತರು ಹೋರಾಟಕ್ಕೆ ಇಳಿಯಲು ಮುಖ್ಯ ‌ಕಾರಣ ಓದಿ.

ಹದಗೆಟ್ಟ ಆಡಳಿತ ವ್ಯವಸ್ಥೆ ಸಮನ್ವಯದ ಕೊರತೆ : ಹೌದು ಒಂದು ಕಾರ್ಖಾನೆ ಅಥವಾ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ಸಾಗಬೇಕಾದರೆ ಅಲ್ಲಿಯ ಆಡಳಿತ ವ್ಯವಸ್ಥೆ ಬಲು ಗಟ್ಟಿಯಾಗಿರಬೇಕು. ಇಲ್ಲವಾದರೆ ಅದೊಂದು ರೀತಿಯಲ್ಲಿ ತೂತು ಬಿದ್ದ ದೋಣಿಯೇ. ಹಾಗೆಯೇ ಆಗಿದೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥೆ. ಆಡಳಿತ ಮಂಡಳಿ ಸದಸ್ಯರು ರೈತರಿಂದ ಚುನಾಯಿತರಾಗಿ ಇದ್ದರು ಕೆಲವೊಂದಿಷ್ಟು ಜನರನ್ನು ಬಿಟ್ಟರೆ ಉಳಿದವರೆಲ್ಲರೂ ದೊಡ್ಡವರ ಬಾಲಗಳಾಗಿಯೇ ಇದ್ದಾರೆ. ರೈತಪರವಾದ ಹಾಗೂ ಅವರಿಗೆ ಅನುಕೂಲವಾಗುವತ್ತ ಗಟ್ಟಿ ಧ್ವನಿ ಇವರಲ್ಲಿ ಇಲ್ಲವೇ ಇಲ್ಲ.

ಬಾಕಿ ಬಿಲ್ ಉಳಿಸಿಕೊಂಡು ರೈತರಿಗೆ ಮೋಸ : ಕಾರ್ಖಾನೆ ವಿರುದ್ಧ ರೈತರು ಇಷ್ಟೊಂದು ಪ್ರಮಾಣದಲ್ಲಿ ಆಕ್ರೋಶ ಹೊರ ಹಾಕಲು ಪ್ರಮುಖ ಕಾರಣವೇ ಕಬ್ಬಿನ ಬಾಕಿ ಬಿಲ್ ನೀಡದಿರುವುದು. ಕೃಷ್ಣಾ ಸಕ್ಕರೆ ಕಾರ್ಖಾನೆಗೆ  ರೈತರು ಪೂರೈಸಿದ ಕಬ್ಬಿಗೆ 2018-19 ನೇ ಸಾಲಿನಲ್ಲಿ 300 ರೂ 2020-21 ನೇ ಸಾಲಿನಲ್ಲಿ 200 ಬಾಕಿ ಹಣ ಇದುವರೆಗೂ ಪಾವತಿಸಿಲ್ಲ. ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ ಅದರಲ್ಲಿ ಬಾಕಿ ಉಳಿಸಿಕೊಂಡು ರೈತರನ್ನು ಕಾಯಿಸುವ ಕೆಲಸ ಕಾರ್ಖಾನೆ ಮಾಡುತ್ತಿರುವ ಹಿನ್ನಲೆಯಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.

ಭ್ರಷ್ಟಾಚಾರದ ಆರೋಪ : ಹೌದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮೇಲೆ ಸಧ್ಯ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರು ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ತನಿಖೆಗಳಾಗಲಿ ನಡೆದಿಲ್ಲ. ಈ ಕುರಿತಾಗಿ ಹಲವು ಬಾರಿ ವಿರೋಧ ಪಕ್ಷಗಳು ಆಗ್ರಹಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಕಲಿ ಬಿಲ್ ಸೃಷ್ಟಿಸಿ ಕಾರ್ಖಾನೆ ಹಣ ಲೂಟಿ ಮಾಡಿ ನಷ್ಟದ ಸುಳಿಗೆ ಸಿಲುಕಿಸಿರುವ ಕೆಲಸ ನಡೆದಿದೆ ಎಂದು ರೈತರ ಆರೋಪವಾಗಿದೆ

ಸ್ವಜನಪಕ್ಷಪಾತ ಹಾಗೂ ಸವದಿ ಮೇನಿಯಾ : ಸಧ್ಯ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷರಾಗಿರುವವರು ಸ್ವತಃ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಹೋದರ ಪರಪ್ಪ ಸವದಿ. ಈ ಕಾರಣಕ್ಕೆ ಕಾರ್ಖಾನೆ ಆಡಳಿತ ವ್ಯವಹಾರದಲ್ಲಿ ಕೆಲವು ಸದಸ್ಯರನ್ನು ದೂರ ಮಾಡುವ ಕೆಲಸ ನಡೆಯುತ್ತಿದೆ ಎಂಬುದು ಇಲ್ಲಿನ ಆರೋಪ. ಅಷ್ಟೇ ಅಲ್ಲದೆ ಆಡಳಿತ ಸದಸ್ಯರು ಹಾಗೂ ಅಧಿಕಾರಿಗಳ ಮೇಲೆ ವ್ಯಕ್ತಿಕೇಂದ್ರಿತ ಹಿಡಿತ ಜಾಸ್ತಿ ಇದೇ ಎಂಬುದು ಸತ್ಯ.

ಈ ಹಿಂದೆ ಬಾಕಿ ಉಳಿದಿದ್ದ ಕಬ್ಬಿನ ಬಿಲ್ ಪಾವತಿಸಿ ಎಂದು ನಮ್ಮ ಸಂಘದ ವತಿಯಿಂದ ಹಲವು ಬಾರಿ ಮನವಿ ಮಾಡಿದ್ದರೂ ಸಹ ಇಲ್ಲಿಯವರೆಗೆ ಕಾರ್ಖಾನೆಯವರಿಂದ ಯಾವುದೆ ಸ್ಪಂದನೆ ಬಂದಿಲ್ಲ. ರೈತರ ಹಿತಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಥಣಿ ಘಟಕದ ವತಿಯಿಂದ ದಿನಾಂಕ 20 ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡುತ್ತದೆ.

ಶಶಿಕಾಂತ ಪಡಸಲಗಿ
ರೈತ ಮುಖಂಡರು ಅಥಣಿ

Advertisement

Leave a reply

Your email address will not be published. Required fields are marked *