ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾ ಪಂಚ್
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2 A ಮೀಸಲಾತಿ ನೀಡುವಂತೆ ಶುಕ್ರವಾರ ಬೆಳಗಾವಿ ನಗರದಲ್ಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಸಮಾವೇಶ ನಡೆಯಿತು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾಲ್ನಡಿಗೆ ಮೂಲಕ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮುದಾಯದ ಸಾವಿರಾರು ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ನಗರದ ಗಾಂಧಿ ಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ. ಪಂಚಮಸಾಲಿ ಸಮುದಾಯಕ್ಕೆ 2 – A ಮೀಸಲಾತಿ ಹೋರಾಟ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದು ಸರ್ಕಾರ ಕೂಡಲೇ ಮೀಸಲಾತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಂಚಮಸಾಲಿ ಹೋರಾಟದ ನ್ಯೂಸ್ ಅಪ್ಡೇಟ್ ಪಡೆಯಲು ನಮ್ಮ What’s App ಗ್ರುಪ್ ಸೇರಿ
https://chat.whatsapp.com/FOJX6YDrw6u1Y814Ycyi23
ಮಾಜಿ ಶಾಸಕ ಹಾಗೂ ಆಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ. ಇದು ನಮ್ಮ ಪಂಚಮಸಾಲಿ ಸಮುದಾಯದ ಕೊನೆಯ ಹೋರಾಟ. ಈ ಹೋರಾಟಕ್ಕೆ ಮನಿದು ಸರ್ಕಾರ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ. ಗೌಡ ಲಿಂಗಾಯತ, ಪಂಚಮಸಾಲಿ, ಧೀಕ್ಷ ಲಿಂಗಾಯತ, ಗೌಳಿ ಲಿಂಗಾಯತ ಸಾಕಷ್ಟು ಜನಸಂಖ್ಯೆಯಲ್ಲಿದ್ದೇವೆ. ನಾವು ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ. ಮೀಸಲಾತಿ ಸಿಗುವವರೆಗೂ ನಾನು ನಿಮ್ಮೊಂದಿಗೆ ಇದ್ದು ಹೋರಾಟ ಮಾಡುತ್ತೇನೆ. ನಮಗೆ ಏನೂ ಕಡಿಮೆ ಇಲ್ಲ. ಆದರೆ ನಮ್ಮ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದೇವೆ. ನಿಮ್ಮ ಊರಿಗೆ, ಹಳ್ಳಿಗೆ ರಾಜಕಾರಣಿಗಳು ಬಂದರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವಾಗ ಎಲ್ಲಿ ಇದ್ದೆ ಎಂದು ಪ್ರಶ್ನಿಸಿ.
ಒಬ್ಬ ರಾಜಕಾರಣಿಯ ಬಿಡೆಯಲ್ಲಿ ನಾವು ಇರುವುದು ಬೇಡ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟ ಆರಂಭಿಸಿರುವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಬದಲಾವಣೆ ಮಾಡಿ ಬೇರೆ ಸ್ವಾಮೀಜಿ ತರುವ ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಶ್ರೀಗಳು ಭಯ ಪಡುವ ಅಗತ್ಯ ಇಲ್ಲ. ನಮ್ಮ ಸಮಾಜದ ಪ್ರತಿಯೊಬ್ಬರು ನೂರು ರು. ಕೊಟ್ಟರೆ ಹತ್ತು ಕೋಟಿ ರು. ಸಂಗ್ರಹವಾಗುತ್ತದೆ. ಆ ಹಣದಲ್ಲಿ ನಿಮಗೆ ಮಠ ಸ್ಥಾಪಿಸಿ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಹೋರಾಟದ ನ್ಯೂಸ್ ಅಪ್ಡೇಟ್ ಪಡೆಯಲು ನಮ್ಮ What’s App ಗ್ರುಪ್ ಸೇರಿ
https://chat.whatsapp.com/FOJX6YDrw6u1Y814Ycyi23