ಅಕ್ಟೊಬರ್ 19 & 20 ಕ್ಕೆ ಬೆಳಗಾವಿಯಲ್ಲಿ “ಕರುನಾಡು” ಫ್ಯಾಷನ್ ಶೋ ಗ್ರ್ಯಾಂಡ್ ಫಿನಾಲೆ
ಬೆಳಗಾವಿ : ಬರುವ ಅಕ್ಟೋಬರ್ 18 ಕ್ಕೆ ಬೆಳಗಾವಿಯಲ್ಲಿ AS Presents ಹಾಗೂ ಆಯುಶ್ ಅಮನ್ ಹೆಲ್ಪಿಂಗ್ ಹ್ಯಾಂಡ್ ಸಹಯೋಗದಲ್ಲಿ Mr. & Mis ಪ್ಯಾಶನ್ ಶೋ ಆಯೋಜನೆ ಮಾಡಲಾಗಿದೆ ಎಂದು ಆಯೋಜಕಿ ರುಪಾಲಿ ಹೊಸಕೋಟೆ ಹೇಳಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇವರು. ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದಬೆಂಗಳೂರಿನ ಪ್ರತಿಷ್ಠಿತ ಎಸ್ ಪ್ರಜೆಂಟ್ಸ್ ತಂಡ ಹಾಗೂ ಬೆಳಗಾವಿಯ ಆಯುಶ್ ಅಮನ್ ಹೆಲ್ಪಿಂಗ್ ಹ್ಯಾಂಡ್ ಸಹಯೋಗದಲ್ಲಿ ಅಕ್ಟೋಬರ್ 19 ಮತ್ತು 20 ರಂದು ಬೆಳಗಾವಿಯ ಆದರ್ಶ ಪ್ಯಾಲೆಸ್ ಹೊಟೆನಲ್ಲಿ “ಕರುನಾಡು” ಮಿಸ್ಟರ್ & ಮಿಸಸ್ ಫ್ಯಾಷನ್ ಶೋ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದ ಐದು ಭಾಗಗಳಲ್ಲಿ ಫ್ಯಾಷನ್ ಶೋ ಆಡಿಷನ್ ನಡೆಸಲಾಗಿದ್ದು. ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಸ್ಪರ್ಧೆಗಳು ಪಾಲ್ಗೊಳ್ಳಲಿದ್ದು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ ಎಂದರು. ಅಂತಿಮ ಘಟದಲ್ಲಿ ಪೈನಲ್ ನಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಿಶೇಷ ಕಿರು ತೆರೆಯಲ್ಲಿ ಅವಕಾಶ ಕಲ್ಪಿಸುವ ಕೆಲವನ್ನು ನಾವು ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ A.S Presents ಹಾಗೂ ಕರುನಾಡು ತಂಡ ಮುಖ್ಯಸ್ಥ ಬೆಂಗಳೂರಿನ ಅಪ್ಪು, ಕೊರಿಯೊಗ್ರಾಫರ್ ಶ್ರೀಕಾಂತ್, ಆಯುಶ್ ಹೊಸಕೋಟೆ, ಮಾಡೆಲ್ ಹಾಗೂ ನಟಿ ಹರ್ಷಿತಾ, ಕಾಸ್ಟ್ಯುಮ್ ಡಿಸೈನರ್ – ಯಶಸ್ವಿನಿ ವೈ. ಕೀರ್ತನಾ ಹಾಗೂ ಎಮ್ ಟಿ ಪಾಟೀಲ್ ಉಪಸ್ಥಿತರಿದ್ದರು.