ಬೆಳಗಾವಿ ಮೂಲದ ಗೋಲ್ಡ್ ಸುರೇಶ್ ಸಧ್ಯ ಬಿಗ್ ಬಾಸ್ ಸ್ಪರ್ಧಿ
ಬೆಳಗಾವಿ : ಬಿಗ್ ಬಾಸ್ ಕನ್ನಡ – 11 ಭಾನುವಾರದಿಂದ ಅದ್ಧೂರಿ ಪ್ರಾರಂಭ ಖಂಡಿದ್ದು ಸ್ಪರ್ಧಾಳುಗಳು ಒಬ್ಬೊಬ್ಬರಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಮಧ್ಯೆ ಮೈತುಂಬ ಬಂಗಾರದ ಆಭರಣ ಹಾಕಿಕೊಂಡ ಗೋಲ್ಡ್ ಸುರೇಶ್ ಅವರು ನಮ್ಮ ಬೆಳಗಾವಿ ಮೂಲದವರು ಎಂಬುದು ಮತ್ತೊಂದು ವಿಶೇಷ.
ಹೌದು ಬಿಗ್ ಬಾಸ್ ಗೆ ಪ್ರವೇಶ ಪಡೆದಿರುವ ಗೋಲ್ಡ್ ಸುರೇಶ್ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದವರು. ಹತ್ತನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದಿರುವ ಇವರು ನಂತರದ ದಿನಗಳಲ್ಲಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಆರಂಭದಲ್ಲಿ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಕಳೆದ ಬಿಬ್ ಬಾಸ್ ನಲ್ಲಿ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದರೆ ಈ ಬಾರಿಗೆ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವ ಫ್ಯಾಷನ್ ಹೊಂದಿರುವ ಇವರು ವಿಶೇಷ ವ್ಯಕ್ತಿ. ಇವರ ಪೂರ್ಣ ಹೆಸರು ಸುರೇಶ್ ನಾರಪ್ಪಗೋಳ.