
ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲಿ ಮುಖಭಂಗ ; ಕನ್ನಡಿಗರ ಕ್ಷಮೆ ಕೇಳುವಂತೆ ನ್ಯಾಯಮೂರ್ತಿ ತಾಕೀತು

ಬೆಂಗಳೂರು : ಕನ್ನಡದ ತಾಯಿ ಭಾಷೆ ತಮಿಳು ಎಂದು ಹೇಳಿಕೆ ನೀಡಿ ಕ್ಷಮೆ ಕೇಳದೆ ಸೊಕ್ಕು ಪ್ರದರ್ಶನ ಮಾಡಿದ್ದ ನಟ ಕಮಲ್ ಹಾನಸ್ ನನ್ನು ಹೈಕೋರ್ಟ್ ತರಾಟೆಗೆ ತಗೆದುಕೊಂಡಿದೆ.
ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಹಾಗೂ ಸೂಕ್ತ ಭದ್ರತೆ ಒದಗಿಸುವಂತೆ ನಟ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನಟ ಕಮಲ್ ಹಾಸನ್ ನನ್ನು ತರಾಟೆಗೆ ತಗೆದುಕೊಂಡಿದೆ.
ನಟ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ತನ್ನ ಸಿನಿಮಾ ಬಿಡುಗಡೆ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸರಿಯಾಗಿ ಬೆಂಡೆತ್ತಿದ್ದಾರೆ.
ನೀವು ನಿಮ್ಮ ಲಾಭಕ್ಕಾಗಿ ಹೋರಾಟ ನಡೆಸುತ್ತಿದ್ದೀರಿ. ಆದರೆ ಮತ್ತೊಬ್ಬರ ಭಾವನೆಗೆ ನೋವುಂಟು ಮಾಡುವುದು ಸರಿಯಲ್ಲ. ನೆಲ, ಜಲ ಭಾಷೆ ವಿಚಾರವಾಗಿ ಎಲ್ಲರೂ ಸೂಕ್ಷ್ಮವಾಗಿರುತ್ತಾರೆ. ಒಂದು ಕ್ಷಮೆ ಎಲ್ಲವನ್ನೂ ತಿಳಿಗೊಳಿಸುತ್ತದೆ. ಯಾವ ಭಾಷೆಯೂ ಇನ್ನೊಂದು ಭಾಷೆಯಿಂದ ಹುಟ್ಟುವುದಿಲ್ಲ ಎಂದು ನ್ಯಾಯಮೂರ್ತಿಗಳು ತರಾಟೆ ತಗೆದುಕೊಂಡರು.
ಮೊದಲು ಕ್ಷಮೆ ಕೇಳಿ, ನಂತರ ನಿಮ್ಮ ಅರ್ಜಿ ಕುರಿತು ವಿಚಾರಣೆ ಮಾಡಬಹುದು. ಸಾರ್ವಜನಿಕ ಬದುಕಿನಲ್ಲಿ ಇರಯವವರು ಮಾತನಾಡುವಾಗ ವಿಚಾರ ಮಾಡಬೇಕು. ತಮಗೆ ಬೇಕಾದ ರೀತಿಯಯಲ್ಲಿ ಮಾತನಾಡುವುದಲ್ಲ ಎಂದು ಬುದ್ದಿ ಹೇಳಿದರು.