ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರ ದೇಹತ್‌ ಜಿಲ್ಲೆಯ ಅತ್ಯಂತ ವಿಲಕ್ಷಣ ಪ್ರೇಮಕಥೆಯೊಂದು ಮುನ್ನೆಲೆಗೆ ಬಂದಿದ್ದು, ಇದನ್ನು ಕೇಳಿ ಸಾಮಾಜಿಕ ಜಾಲತಾಣಗಳ ಮಂದಿ ಅಕ್ಷರಶಃ ದಂಗಾಗಿದ್ದಾರೆ.

ತನ್ನೊಂದಿಗೆ ಏಳು ಹೆಜ್ಜೆ ಇಟ್ಟಿದ್ದ ಹೆಂಡತಿಯನ್ನು ಅರ್ಥದಲ್ಲೇ ಕೈಬಿಟ್ಟ ವ್ಯಕ್ತಿಯೊಬ್ಬ, ಅದೇ ಹೆಂಡತಿಯನ್ನು ಹೆತ್ತ ಸ್ವಂತ ಅತ್ತೆಯನ್ನೇ ಪ್ರೀತಿಸಿ ಕೋರ್ಟ್‌ ಮ್ಯಾರೇಜ್‌ ಮಾಡಿಕೊಂಡಿರುವ ಘಟನೆ ಕಾನ್ಪುರ ದೇಹತ್‌ನ ಅಕ್ಬರ್‌ಪುರ ಎಂಬಲ್ಲಿ ನಡೆದಿದೆ.

ವಿಡಿಯೋ ರಿಲೀಸ್‌ ಮಾಡಿದ ಜೋಡಿ : ಈ ವಿಚಿತ್ರ ಮದುವೆಯ ಸಂಪೂರ್ಣ ವಿವರಗಳು ಇನ್ನೂ ಅಧಿಕೃತವಾಗಿ ಬಹಿರಂಗಗೊಳ್ಳಬೇಕಾಗಿದ್ದರೂ, ಈ ಸುದ್ದಿ ಮಾತ್ರ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಹೊಸ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆದ ಬೆನ್ನಲ್ಲೇ ಈ ವಿವಾದ ಮುನ್ನೆಲೆಗೆ ಬಂದಿದೆ. ವೈರಲ್‌ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ

ಈ ಜೋಡಿಯು ತಮ್ಮ ಮದುವೆಯ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದುಕೊಂಡು, ಸಾರ್ವಜನಿಕರು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಬೇಕು ಮತ್ತು ತಮಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.