ಕೋಳಿಗುಡ್ಡ: ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ದಸರಾ ಉತ್ಸವದ ಪ್ರಯುಕ್ತ ಶ್ರೀ ಕಾಳಿಕಾ ಭುವನೇಶ್ವರಿ ಜಾತ್ರಾ ಮಹೋತ್ಸವದಲ್ಲಿ ನೋಡು ಬಾ ಕೋಳಿಗುಡ್ಡ ರಥೋತ್ಸವ ಭಕ್ತಿ ಹಾಡು ಬಿಡುಗಡೆ ಮಾಡಲಾಯಿತು. ಮುದಗಲ ಮಠದ ಮಹಾಂತ ಸ್ವಾಮಿಗಳು ಹಾಗೂ ಕೋಳಿಗುಡ್ಡ ಮಠದ ಬಸಯ್ಯ ಸ್ವಾಮಿಗಳು ಭಕ್ತಿ ಹಾಡು ಬಿಡುಗಡೆ ಮಾಡಿದರು.

ದಸರಾ ಉತ್ಸವ ಪ್ರಯುಕ್ತ ಕೋಳಿಗುಡ್ಡ ಗ್ರಾಮದಲ್ಲಿ ಶ್ರೀ ಕಾಳಿಕಾ ಭುವನೇಶ್ವರಿ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ದಸರಾ ಉತ್ಸವದ ಹಿನ್ನಲೆಯಲ್ಲಿ ರಥೋತ್ಸವ ನಡೆಯುತ್ತದೆ ಕಾಳಿಕಾ ರಥೋತ್ಸ , ಜಾತ್ರೆಯ ಸಂಭ್ರದ ಕುರಿತು ಹಾಡು ಬಿಡಗಡೆ ಮಾಡಿದ್ದು ಯುವ ಪತ್ರಕರ್ತ ಜಿತೇಂದ್ರ ಕಾಂಬಳೆ ಸಾಹಿತ್ಯಕ್ಕೆ ಅಥಣಿಯ ಸಂಜೀವ್ ಪಾರ್ಥನಳ್ಳಿ ಗಾಯನ ಮಾಡಿದ್ದು ಮುನ್ನಾ ಚಿತ್ರದುರ್ಗ ಸಂಗೀತ ನೀಡಿದ್ದಾರೆ‌. ರಾಗ ಸಂಯೋಜನೆ ಮುತ್ತುರಾಜ್ ಸಿಂದಿಕುರಬೇಟ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಯುವ ಮುಖಂಡ ಶರಣಗೌಡ ಪಾಟೀಲ್, ಅಪ್ಣನಗೌಡ ಪಾಟೀಲ್, ಬಸನಗೌಡ ಪಾಟೀಲ್ ತಮ್ಮಣಿ ಪೂಜಾರಿ, ಸಿದ್ರಾಮ ಕಾಂಬಳೆ, ಮಹಾದೇವ್ ಕಾಂಬಳೆ ಸೇರಿದಂತೆ ಗ್ರಾಮಸ್ತರು ಗುರು ಹಿರಿಯರು ಭಾಗಿಯಾಗಿದ್ದರು.