
ಅಥಣಿ : ಕಾರಿನಲ್ಲಿ ಶವ ಬಿಟ್ಟು ಪರಾರಿ ; ವ್ಯಕ್ತಿಯ ಹತ್ಯೆ…?

ವಿಜಯಪುರ: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕಾರಿನಲ್ಲಿ ಶವ ಬಿಟ್ಟ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಹಳ್ಳಿ ಗ್ರಾಮದ ಸಂಗಪ್ಪ ರಾಮು ದೇವಕತೆ (58) ಮೃತಪಟ್ಟವನು.
ಸಂಗಪ್ಪ ದೇವಕತೆ ಈತನನನ್ನು ಎಲ್ಲಿಯೋ ಹತ್ಯೆ ಮಾಡಿ, ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ಕಾರಿನ ಸಮೇತ ಶವವನ್ನು ಇಲ್ಲಿನ ಜಿಲ್ಲಾಸ್ಪತ್ರೆ ಆವರಣಕ್ಕೆ ತಂದು, ದುಷ್ಕರ್ಮಿಗಳು ಓಡಿ ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.