ಬೆಂಗಳೂರು : ಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಹದಿನಾಲ್ಕು ಜನ ನೂತನ ಸಚಿವರು ಪ್ರಮಾಣವಚನ ತಗೆದುಕೊಂಡಿದ್ದಾರೆ. ಇನ್ನೇನು ಹೊಸ ಸಚಿವರಿಗೆ ಖಾತೆಗಳ ಹಂಚಿಕೆ ಆಗಬೇಕು ಎನ್ನುವಷ್ಟರಲ್ಲಿ ಹಿರಿಯ ಸಚಿವರೊಬ್ಬರು ಪ್ರಮುಖ‌ ಖಾತೆಗಾಗಿ ಮುನಿಸಿಕೊಂಡಿದ್ದು ರಾಜೀನಾಮೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದ ರಾಮಲಿಂಗಾರೆಡ್ಡಿ ಅವರು ಡಿಕೆಶಿ ಸಂಪುಟದಲ್ಲಿ ಸಚಿವರಾಗಿ ಮುಂದುವರಿದಿದ್ದಾರೆ. ಈ ಹಿಂದೆ ಇದ್ದ ಸಾರಿಗೆ ಬದಲಿಗೆ ಬೇರೆ ಖಾತೆ ನೀಡುವ ಕುರಿತು ಚರ್ಚೆ ನಡೆದಿತ್ತು.

ಆದರೆ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಉಸ್ತುವಾರಿ, ಹಾಗೂ ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಈ ಖಾತೆ ಮೇಲೆ ಇನ್ನು ಕೆಲ ಬೆಂಗಳೂರಿನ ಶಾಸಕರು ಆಸಕ್ತಿ ತೋರಿದ್ದು ಯಾರಿಗೆ ಖಾತೆ ನೀಡಬೇಕು ಎಂಬ ಚರ್ಚೆ ಪಕ್ಷದ ವಲಯದಲ್ಲಿ ಜೋರಾಗಿವೆ.

ಈ ಮಧ್ಯೆ ನನಗೆ ಬೆಂಗಳೂರು ಉಸ್ತುವಾರಿ ಸೇರಿದಂತೆ ನಗರಾಭಿವೃದ್ಧಿ ಖಾತೆ ನೀಡಬೇಕು ಇಲ್ಲವಾದರೆ ನಾನು ಸಚಿವಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನೇರವಾಗಿ ಹೇಳಿದ್ದಾರೆ. ಇದರಿಂದ ಸಧ್ಯ ಡಿಕೆಶಿ ಗೆ ತಲೆನೋವಾಗಿದ್ದು ಖಾತೆ ಹಂಚಿಕೆ ಕುರಿತು ಚರ್ಚೆಗಳು ಮುಂದುವರಿದಿವೆ.