
ಶೆಟ್ಟರ್ ಗೆಲುವು ಬಹುತೇಕ ಫಿಕ್ಸ್ ; ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಕಮಾಲ್

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಮುಂದುವರಿದಿದ್ದು ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವಿನ ಸನಿಹಕ್ಕೆ ಬಂದಿದ್ದಾರೆ.
ಈವರೆಗೆ ಸುಮಾರು 12 ಲಕ್ಷ ಮತ ಎಣಿಗೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 6 ಲಕ್ಷ 3165 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ 5 ಲಕ್ಷ 18584 ಮತ ಪಡೆದಿದ್ದು ಶೆಟ್ಟರ್ 1 ಲಕ್ಷ 41 ಸಾವಿರ ಮತ ಪಡೆದಿದ್ದಾರೆ.
ಇನ್ನೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 86,255 ಮತಗಳ ಅಂತ ಪಡೆದಿದ್ದು ಗೆಲುವಿನ ಸನಿಹದಲ್ಲಿದ್ದಾರೆ.