ಬೆಳಗಾವಿ : ಬಿಡಿಸಿಸಿ ಬ್ಯಾಂಕಿನಲ್ಲಿ ನಡಿಸಲಾಗುತ್ತಿರುವ 104 ವಿವಿಧ ಹುದ್ದೆಗಳ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಸಹಕಾರ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಬೆಳಗಾವಿ ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು 104 ವಿವಿಧ ಹುದ್ದೆಗಳಿಗಾಗಿ ಕರೆದ ನೇರ ನೇಮಕಾತಿಯಲ್ಲಿ ವಯೋಮಿತಿ ವಿನಾಯತಿ, ಗುಮಾಸ್ತ ಹುದ್ದಿಗೆ ಪದವಿ ಕಡ್ಡಾಯಗೊಳಿಸಿದ್ದು ಜೊತೆಗೆ ನಬಾರ್ಡ್ ಕಾರ್ಯಸೂಚಿ ಪಾಲಿಸಲಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಜುಲೈ 27 ರಂದು ಹೊರಡಿಸಿರುವ ನೇಮಕಾತಿಯಲ್ಲಿ ಲೋಪದೋಷಗಳು ಕಂಡಿಬಂದಿದ್ದು ಈ ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ನೂನ್ಯತೆಗಳನ್ನು ಸರಿಪಿಸಿಕೊಂಡು ನಬಾರ್ಡ್ ಮಾರ್ಗಸೂಚಿ ಪಾಲಿಸಿಕೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ನೇಮಕಾತಿ ಕೈಗೊಳ್ಳುವಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿ ಸೂಚನೆ ನೀಡಿದೆ.


