Select Page

ಬಿಜೆಪಿ ಬಂಡಾಯಕ್ಕೆ ಲಕ್ಷ್ಮಣ ರೇಖೆ…!

ಬಿಜೆಪಿ ಬಂಡಾಯಕ್ಕೆ ಲಕ್ಷ್ಮಣ ರೇಖೆ…!

ಹುಬ್ಬಳ್ಳಿ ಧಾರವಾಡದಿಂದ ಬೆಳಗಾವಿ ಪಾಲಿಕೆಗೆ ಅಶ್ವಮೇಧ ತಿರುಗಿಸಿದ ಲಕ್ಷ್ಮಣ ಸವದಿ

ಬೆಳಗಾವಿ ವಾಯ್ಸ್ ಎಕ್ಸಪೋಸ್

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಬಿಜೆಪಿ ವಿರುದ್ಧ ಸಿಡಿದ್ದೇದಿರುವ ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ವಾಲಿಸಲು ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಬಿಜೆಪಿ ಬಂಡಾಯಕ್ಕೆ ಲಕ್ಷ್ಮಣ ರೇಖೆ ಎಳೆದು, ಚುನಾವಣಾ ಅಖಾಡದಲ್ಲಿ ರಣತಂತ್ರ ರೂಪಿಸಲು ಟೊಂಕ ಕಟ್ಟಿ ನಿಂತಿದ್ದಾರೆ‌.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಳಗಾವಿಯಲ್ಲಿ ಲಿಂಗಾಯತ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ಕಡೆಗಣಿಸಿರುವುದು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಲಿಂಗಾಯತರನ್ನು ಒಗ್ಗೂಡಿಸಲು  ಸವದಿ ತಮ್ಮದೆಯಾದ ರಣತಂತ್ರ ಹೆಣೆಯುತ್ತಿದ್ದಾರೆ.

ಲಕ್ಷ್ಮಣ್ ಸವದಿ ಅವರ ಚುನಾವಣೆಯ ಚಾಣಕ್ಷತನವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಿಜೆಪಿ ಹೈಕಮಾಂಡ್ ಅವಕಾಶ ಸಿಕ್ಕಾಗ ಇವರನ್ನು ನೆರೆಯ ಮಹಾರಾಷ್ಟ್ರ, ಗೋವಾ ಚುನಾವಣೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಅಲ್ಲಿಯೂ ಸಹ ತಮ್ಮ ಚಾಣಕ್ಷತನದಿಂದ ಚುನಾವಣೆಯನ್ನು ನಡೆಸಿರುವ ಸವದಿ ಅವರು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಲಿಂಗಾಯತ ಬಿಜೆಪಿ ಕಾರ್ಯಕರ್ತರಿಗೆ ಕಡೆಗಣನೆ ಮಾಡಿರುವ ಕೂಗು ದಟ್ಟವಾಗಿ ಕೇಳಿ ಬರಲು ಆರಂಭಿಸಿದಾಗ ಮತ್ತೆ ಬೆಳಗಾವಿ ಕಡೆಗೆ ತಮ್ಮ ಅಶ್ವಮೇಧ ಕುದುರೆಯನ್ನು ತಿರುಗಿಸಿರುವ ಸವದಿ ಲಿಂಗಾಯತ ಮುಖಂಡರೊಂದಿಗೆ ಮಾತುಕತೆ ನಡೆಸುವ ಲಕ್ಷಣ ಇದ್ದು, ಇದು ಬೇರೆ ಪಕ್ಷಗಳಿಗೆ ಸವದಿ ಉರಿಯುವ ಸೂರ್ಯನಂತೆ ನಿಂತಿರುವುದು ಮಾತ್ರ ಸತ್ಯ.

ಬಿಜೆಪಿಯಲ್ಲಿನ ಲಿಂಗಾಯತರ ಅಸಮಾಧಾನವನ್ನು ಹೊಂಚು ಹಾಕಿಕೊಂಡು ಕುಳಿತಿದ್ದ ಬೇರೆ ಪಕ್ಷಗಳಿಗೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಗಮನದಿಂದ ನಡುಕ ಸೃಷ್ಟಿಯಾಗಿದೆ. ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯ ಮಿಷನ್ 45+ ಗೆಲ್ಲಿಸಿಕೊಟ್ಟು ಪಾಲಿಕೆಯ ಮೇಲೆ ಬಿಜೆಪಿ ಬಾವುಟ ಹಾರಿಸುವ ಶಪಥವನ್ನು ಲಕ್ಷ್ಮ ಸವದಿ ತೊಟ್ಟಿದ್ದು, ಈ ನಿಟ್ಟಿನಲ್ಲಿ ಎಲ್ಲ ವಿಘ್ನಗಳಿಗೂ ಸವದಿ ಬೆಳಗಾವಿ ಮಹಾನಗರ ಪಾಲಿಕೆಯ ಸುತ್ತಲೂ ಲಕ್ಷ್ಮಣ ರೇಖೆ ಹಾಕಿ ಕಾವಲು ಕಾಯ್ದು ರಣತಂತ್ರ ರೂಪಿಸುತ್ತಿದ್ದಾರೆ ಎಂಬುದು ಸಧ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಬೆಳಗಾವಿ ವಾಯ್ಸ್ – ಇದು ನಿಮ್ಮ ಧ್ವನಿ : ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಹಿಂಬಾಲಿಸಿ.

Advertisement

Leave a reply

Your email address will not be published. Required fields are marked *

error: Content is protected !!