
ಶೀಘ್ರವೇ ನಾಡಿನ ಮುಖ್ಯಮಂತ್ರಿಗಳಾಗಿ : ಸವದಿಗೆ ಆಶಿರ್ವಾದ ನೀಡಿದ ಗುರೂಜಿ ಯಾರು..?

ಬೆಳಗಾವಿ : ನಿಲಜಿ ಗ್ರಾಮದಲ್ಲಿರುವ ಅಲೌಕಿಕ್ ಧ್ಯಾನ ಮಂದಿರಕ್ಕೆ. ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಲಕ್ಷ್ಮಣ ಸವದಿ ಭೇಟಿ ನೀಡಿದರು.

ಅಲೌಕಿಕ ಧ್ಯಾನ ಮಂದಿರದದಲ್ಲಿ ನೂತನವಾಗಿ ಆರಂಭವಾಗಿರುವ ಸದ್ವಿಧ್ಯಾ ಗುರುಕುಲದ ಮಕ್ಕಳೊಂದಿಗೆ ಬೆರೆತು ಶ್ಲೋಕ ಮಂತ್ರಗಳನ್ನು ಆಲಿಸಿ, ಗುರೂಜಿಯವರ ನೀಡಿದ ಸತ್ಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಗುರೂಜಿಯವರನ್ನು ಗೌರವಿಸಿದರು.

ಶೀಘ್ರವೇ ನಾಡಿನ ಮುಖ್ಯಮಂತ್ರಿಗಳಾಗಿ ಮಠಕ್ಕೆ ಆಗಮಿಸಬೇಕೆಂದು ಲಕ್ಷ್ಮಣ ಸವದಿಗೆ ಆಶೀರ್ವದಿಸಿದ್ದಾರೆ. ಈ ಸಂದರ್ಭದಲ್ಲಿ. ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲೆಯ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಹುಕಾರ್ ತಂತ್ರಕ್ಕೆ ಕಮಲ ಕಿಲಕಿಲ : ಇದನ್ನೂ ಓದಿ ::::::::::::
https://belagavivoice.com/laxman_savadi_election_power/#.Ysg5tECOxpw.whatsapp