
ಅಥಣಿ : ಕಾಲುವೆಗೆ ಬಿದ್ದ ಕಾರು : ಇಬ್ಬರು ಯುವಕರು ಸಾವು

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಚಾಲಕ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಬಿದ್ದಿರುವ ಘಟನೆ ಸಂಭವಿಸಿದೆ.
ಕರಿಮಸೂತಿ ಏತ ನೀರಾವರಿ ಕಾಲುವೆಗೆ ಕಾರು ಬಿದ್ದಿದ್ದು, ಮಹಾದೇವ ಚಿಗರಿ(26)
ಸುರೇಶ ಬಡಚಿ (27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ ಇಬ್ಬರು ಯುವಕರು ರಡ್ಡೇರಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಶ್ರೀಕಾಂತ ನಡುವಿನಮನಿ ಘಟನಟ್ಟಿ ಗ್ರಾಮದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. MH 05 AB 6674 ನಂಬರ ಹೊಂದಿರುವ ಕಾರು ಅವಘಡದಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಹಾಗೂ ಪೊಲೀಸರ ಕಾರ್ಯಾಚರಣೆ ನಡೆದಿದ್ದು. ಕಾರು ಹಾಗೂ ಮೃತ ಯುವಕರನ್ನು ಹೊರತೇಗಲಾಗಿದೆ.