Video : ಅಥಣಿ ತಾಲೂಕಿನಲ್ಲಿ ಭೂಕಂಪ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಅಥಣಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಭೂಕಂಪವಾಗಿದ್ದು ಜನರು ಮನೆಯಿಂದ ಹೊರ ಬಂದ ಘಟನೆ ಬೆಳಕಿಗೆ ಬಂದಿದೆ.
ಪಕ್ಕದ ವಿಜಯಪುರದಲ್ಲಿ ಆಗಾಗ್ಗೆ ಭೂಕಂಪವಾಗುತ್ತಿದ್ದು ಶನಿವಾರದಂದು ಹಲವೆಡೆ ಭೂಮಿ ಕಂಪಿಸಿದೆ. ಜೊತೆಗೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಕೂಡಾ ಭೂಕಂಪನವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಗ್ರಾಮಕ್ಕೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೇ, ಅಥಣಿ ಡಿವೈಎಸ್ಪಿ ಎಸ್ ವ್ಹಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ ಭೇಟಿ ಗ್ರಾಮಸ್ಥರಿಗೆ ಧೈರ್ಯ ಹೇಳಿದರು. ಭೂಕಂಪದಿಂದ ಹಾನಿ ಸಂಭವಿಸಿದ ಮನೆಗಳನ್ನು ತಹಶೀಲ್ದಾರ್ ಬೇಟೆ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಜೊತೆ ಮಾತನಾಡಿ, ಶಿರಹಟ್ಟಿ ಗ್ರಾಮದಲ್ಲಿ ಬೆಳಗಿನ 6:20 ಆಸುಪಾಸಿನಲ್ಲಿ ಭೂಕಂಪ ಆಗಿದ್ದು. ರಿಕ್ಟರ್ 3 ತೀವ್ರತೆಯಲ್ಲಿ ಭೂಮಿ ನಡುಗಿದೆ. ಯಾವುದೇ ಜೀವಹಾನಿ ಸಂಬವಿಸಿಲ್ಲೂ ಕೆಲವು ಮನೆಗಳು ಬಿರುಕು ಬಿಟ್ಟಿದೆ ಎಂದು ಹೇಳುತಿದ್ದಾರೆ. ಆ ಬಿರುಕು ಬಿಟ್ಟ ಮನೆಗಳು ಹಳೆ ಬಿರುಕುಗಳು ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.