ವಾರ್ಡ್ ನಂ 38 ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ : ರಂಜಿತ್ ಕಲಾಲ್
ಬೆಳಗಾವಿ : ಪಕ್ಷಕ್ಕೆ ಸಲ್ಲಿಸಿರುವ ಸೇವೆ ಮತ್ತು ಜನಸಾಮಾನ್ಯರ ಪರವಾದ ಧ್ವನಿ ಎತ್ತುವ ನನ್ನಂತವನಿಗೆ ಈ ಬಾರಿ ಮಹಾನಗರ ಪಾಲಿಕೆಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ಕಲ್ಪಿಸಿದ್ದು, ವಾರ್ಡ್ ನಂ 38 ರ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ರಂಜಿತ್ ಕಲಾಲ ಅಭಿಪ್ರಾಯಪಟ್ಟರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 38 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ರಂಜಿತ್ ಕಲಾಲ್ ಬಿರುಸಿನ ಪ್ರಚಾರ ನಡೆಸಿದ್ದು ಮತಯಾಚನೆಯಲ್ಲಿ ತಿಡಗಿದ್ದಾರೆ. ವಾರ್ಡ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಹಾಗೂ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿರುವೆ ಎಂದರು.
ಬೆಳಗಾವಿ ಉತ್ತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೆಪ್ಪನವರ ಮಾತನಾಡಿ. ಕಳೆದ ಎರಡು ದಿನಗಳಿಂದ ರಂಜಿತ್ ಸ್ಪರ್ಧಿಸಿರುವ 38 ನೇ ವಾರ್ಡಿನಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಾಗಿದೆ. ಜನರು ಉತ್ತಮ ರೀತಿಯ ಸ್ಪಂದನೆ ತೋರುತ್ತಿದ್ದಾರೆ. ಅಭಿವೃದ್ಧಿ ಆಧಾರಿತ ಚುನಾವಣೆ ನಡೆಯುತ್ತಿದ್ದು ಜನ ನಮ್ಮನ್ನು ಬೆಂಬಲಿಸುವ ವಿಶ್ವಾಸ ಇದೆ ಎನ್ನುತ್ತಾರೆ.