Select Page

Advertisement

ವಾರ್ಡ ನಂ 36 ರ ಅಭಿವೃದ್ಧಿ ಕನಸು ಕಂಡಿರುವೆ : ಪುಷ್ಪಾ ಪರ್ವತರಾವ

ವಾರ್ಡ ನಂ 36 ರ ಅಭಿವೃದ್ಧಿ ಕನಸು ಕಂಡಿರುವೆ : ಪುಷ್ಪಾ ಪರ್ವತರಾವ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ರಂಗೆರಿದ್ದು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತನ್ನು ಮುಂದುವರಿಸಿದ್ದಾರೆ. .ಈ ಬಾರಿ ಪಾಲಿಕೆ ಚುನಾವಣೆಗೆ ಭರ್ಜರಿ ಪ್ರಚಾರ ಪ್ರಾರಂಭಸಿರುವ ವಾರ್ಡ್ ನಂ 36ರ ಪಕ್ಷೇತರ ಅಭ್ಯರ್ಥಿ ಪುಷ್ಪಾ ಸಂತೋಷ ಪರ್ವತರಾವ ಅವರು ತಮ್ಮ ಕಚೇರಿ ಕೂಡಾ ಪ್ರಾರಂಬಿಸಿದ್ದಾರೆ. 

ಕಳೆದ ಬಾರಿ ಪುಷ್ಪಾ ಸಂತೋಷ ಪರ್ವತರಾವ ಅವರು ವಾರ್ಡ್ ನಂ 53 ರಿಂದ ಜಯ ಗಳಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳಲನ್ನು ಮಾಡಿ ಜನ ಪ್ರಿಯತೆ ಹೊಂದಿದ್ದಾರೆ. ‌ ಬೆಳಗಾವಿ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪುಷ್ಪಾ ಸಂತೋಷ ಪರ್ವತರಾವ ಅವರ ಚಿನ್ಹೆ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ. 

ವಾರ್ಡ್ ನಂ 36ರ ಪಕ್ಷೇತರ ಅಭ್ಯರ್ಥಿ ಅವರು ಜನರಿಗೆ ಮನವಿ ಮಾಡಿಕೊಂಡಿದ್ದು, ನಾನು ಶ್ರೀಮತಿ ಪುಷ್ಪಾ ಸಂತೋಷ ಪರ್ವತರಾವ ದಿ. 3-9-2021 ರಂದು ಜರುಗಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮಸ್ತ ನಾಗರಿಕರ ಸಂಪೂರ್ಣ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ವಾರ್ಡ 36 ರಿಂದ ಸ್ಪರ್ದಿಸುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಆಗಿನ ವಾರ್ಡ ನಂ. 53 ನೇ ವಾರ್ಡಿನಿಂದ ಪ್ರಜ್ಞಾವಂತ ನಾಗರಿಕರಾದ ತಮ್ಮೆಲ್ಲರ ಆಶೀರ್ವಾದದಿಂದ ಸ್ಪರ್ದಿಸಿ ಆಯ್ಕೆಯಾಗಿ ವಾರ್ಡಿನ ಅಭಿವೃದ್ಧಿಗಾಗಿ ತಮ್ಮೆಲ್ಲರ ಸಹಕಾರದೊಂದಿಗೆ ಶ್ರಮಿಸಿ ಸಫಲವಾಗಿರುತ್ತೇನೆ.  ಸರ್ವ ಜನರ ಬೆಂಬಲದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತೇನೆ. 

ನನ್ನ ವಾರ್ಡಿನ ವ್ಯಾಪ್ತಿಯಲ್ಲಿ ಉದ್ಯಾನವನಗಳು, ಸಮುದಾಯ ಭವನಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿರುತ್ತೇನೆ. ವಾರ್ಡಿನ ನೀರಿನ ಭವಣೆಯನ್ನು ಹೋಗಲಾಡಿಸಲು ಕೊಳವೆ ಭಾವಿಗಳನ್ನು ಕೊರೆಯಿಸಿ, ಪಂಪ್ ಅಳವಡಿಸಿ, ನೀರಿನ ಟ್ಯಾಂಕ ನಿರ್ಮಿಸಿ ನೀರು ಪೊರೈಕೆಗೆ ಶ್ರಮಿಸಿರುತ್ತೇನೆ, ನಿಗದಿತ ಪಾಲಿಕೆಯ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಧ್ಯವಿಲ್ಲವಾದುದರಿಂದ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ಹಿರಿಯ ಜನಪ್ರತಿನಿಧಿಗಳ ಸಹಕಾರದಿಂದ ಹಲವಾರು ಮಹತ್ತರ ಯೋಜನೆಗಳನ್ನು ಕಾರ್ಯಗತಗೊಳಿಸಿರುತ್ತೇನೆ. ಪುನಃ ಮತ್ತೊಮ್ಮೆ ತಾವು ಆಶೀರ್ವದಿಸಿದಲ್ಲಿ ತಮ್ಮೆಲ್ಲರ ನಿರೀಕ್ಷೆಯಂತೆ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಪ್ರವರ್ತಳಾಗುತ್ತೇನೆ. 

Advertisement

Leave a reply

Your email address will not be published. Required fields are marked *