
ಬಡವರ ಪರವಾದ ಬಜೆಟ್ : ಅಭಯ ಪಾಟೀಲ್

ಬೆಳಗಾವಿ : ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ 2024-25 ನೇ ಸಾಲಿನ ಬಜೆಟ್ ಸಂಪೂರ್ಣ ಸಾರ್ವಜನಿಕರ ಪರವಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅಭಿಪ್ರಾಯಪಟ್ಟರು.
ಜನಸಾಮಾನ್ಯರಿಗೆ ಅವಶ್ಯಕ ಇರುವ ಮೂಲಸೌಲಭ್ಯ, ಶಿಕ್ಷಣ, ಕೃಷಿ, ಆರೋಗ್ಯ ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಬಾಂಧವರನ್ನು ಕೇಂದ್ರೀಕರಿಸಿದ್ದು ಅವರಿಗೆ ಸಹಕಾರಿಯಾಗುವ ಹಾಗೂ ಯುವ ಜನತೆ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಜನಪರ ಬಜೆಟ್ ಇದಾಗಿದೆ. ಎಂದರು.