ಅಥಣಿ : ಒಂದು ವರ್ಷದ ಮಗುವನ್ನು ಸುಟ್ಟು ಕಬ್ಬಿನ ಗದ್ದೆಯಲ್ಲಿ ಎಸೆದ ಕ್ರೂರಿಗಳು
ಅಥಣಿ : ಸುಮಾರು ಒಂದು ವರ್ಷದ ಮಗುವನ್ನು ಕಬ್ಬಿನ ಗದ್ದೆಗಳಲ್ಲಿ ಎಸೆದಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದ್ದು, ಮೈಮೇಲೆ ಸುಟ್ಟ ಗಾಯಗಳಾಗಿದ್ದು, ಮಗು ಜೀವಂತವಾಗಿದೆ.
ಅಥಣಿ ತಾಲೂಕಿನ ಹಲ್ಯಾಳ ಗ್ರಾದದ ದರೂರ ಸೇತುವೆ ಪಕ್ಕದ ಕಬ್ಬಿನ ಗದ್ದೆಯಲ್ಲಿ ಮಗುವನ್ನು ಎಸೆಯಲಾಗಿದೆ. ಸ್ಥಳಿಯರು ಈ ಮಗುವನ್ನು ರಕ್ಷಣೆ ಮಾಡಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮಗು ಜೀವಂತವಾಗಿದೆ.
ಇಂದು ಬೆಳಗಿನ ಜಾವ ಮಗುವನ್ನು ಎಸೆದಿರಬಹುದು ಎಂದು ಅಂದಾಜಿಸಲಾಗಿದ್ದು, ಮಗು ಶಕ್ತಿಹೀನ ಸ್ಥಿಯಲ್ಲಿದೆ. ಸ್ಥಳಿಯರೊಬ್ಬರು ರಸ್ತೆ ಪಕ್ಕದಲ್ಲಿ ನಿಂತಾಗ ಮಗುವಿನ ನರಳಾಟ ಕೇಳಿ ಕಬ್ಬಿನ ಗದ್ದೆಯಲ್ಲಿ ನೋಡಿದಾಗ ಮಗು ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.