ವಿಜಯ್ ಸಂಕೇಶ್ವರ್ ಪುತ್ರಿಗೆ ವಾಮಾಚಾರದ ಸಂಕಷ್ಟ ; ಪ್ರತಿಷ್ಠಿತ ಕುಟುಂಬದ ವಿರುದ್ಧ ದಾಖಲಾಯ್ತು ಪ್ರಕರಣ
ಬೆಳಗಾವಿ : ಪ್ರತಿಷ್ಠಿತ ಉದ್ಯಮಿ ವಿಜಯ್ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ್ ಅವರಿಗೆ ಸಧ್ಯ ವಾಮಾಚಾರದ ಸಂಕಷ್ಟ ಎದುರಾಗಿದೆ. ಆಸ್ತಿ ವಿಚಾರವಾಗಿ ತಮ್ಮ ಮೇಲೆ ಮಾಟಮಂತ್ರದ ಪ್ರಯೋಗ ಮಾಡಲಾಗಿದೆ ಎಂದು ಮಾಜಿ ಸಂಸದರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಕುರಿತು ಉದ್ಯಮಿ ವಿಜಯ್ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ್ ಅವರು ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಜಯಕಾಂತ ಡೇರಿ ಪಾಲುದಾರಿಕೆ ಹಾಗೂ ಅದರ ಆಸ್ತಿ ಹೊಡೆಯುವ ಉದ್ದೇಶದಿಂದ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ತಮ್ಮ ವಿರುದ್ಧ ವಾಮಾಚಾರ ಮಾಡಿ ಆಸ್ತಿ ಹೊಡೆಯುವ ಹುನ್ನಾರ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಶಿವಕಾಂತ ಸಿದ್ನಾಳ್ ಅವರ ಒಡೆತನದ ವಿಜಯಕಾಂತ ಡೇರಿ 2006 ರಲ್ಲಿ ಸ್ಥಾಪನೆಯಾಗಿತ್ತು. ಶಿವಕಾಂತ ಅವರು ವಿಜಯ್ ಸಂಕೇಶ್ವರ್ ಅವರ ಎರಡನೇ ಪುತ್ರಿ ದೀಪಾ ಅವರನ್ನು ಮದುವೆಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಿವಕಾಂತ
ಅವರು ಅನಾರೋಗ್ಯದಿಂದ ತೀರಿ ಹೋದ ನಂತರ ವಿಜಯಕಾಂತ ಡೇರಿ ಆಸ್ತಿ ಹೊಡೆಯುವ ಉದ್ದೇಶದಿಂದ ಶಿವಕಾಂತ ಸಹೋದರರ ಕುಟುಂಬ ವಾಮಾಚಾರದ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಶಿವಕಾಂತ್ ಸಿದ್ನಾಳ್ ಅವರು ತೀರಿಹೋದ ನಂತರ ಅವರ ಸಹೋದರ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ಆಸ್ತಿ ಹೊಡೆಯುವ ಹುನ್ನಾರದಿಂದ ವಾಮಾಚಾರ ಮಾಡುತ್ತಿದ್ದಾರೆ.
ಹಾಗೆಯೇ ಶಿವಕಾಂತ್ ಅವರ ಸಮಾಧಿ ಮೇಲೆಯೂ ವಾಮಾಚಾರ ಮಾಡಲಾಗಿದೆ ಎಂದು ವಿಜಯ್ ಸಂಕೇಶ್ವರ್ ಪುತ್ರಿ ದೀಪಾ ಸಿದ್ನಾಳ್ ಜೂನ್ 29 ರಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ವಿಜಯಕಾಂತ ಹಾಲಿನ ಡೇರಿಯಲ್ಲಿ ಸಧ್ಯ ಪ್ರತಿದಿನ 1.20 ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು ಆದಿತ್ಯ ಮಿಲ್ಕ್ ಬ್ರ್ಯಾಂಡ್ ಅಡಿಯಲ್ಲಿ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ವಿಜಯಕಾಂತ ಹಾಲಿನ ಡೇರಿಗೆ ಉದ್ಯಮಿ ವಿಜಯ್ ಸಂಕೇಶ್ವರ್ ಚೇರ್ಮನ್ ಆಗಿದ್ದಾರೆ.