ರಾಯಬಾಗ ಯುವತಿ ಸಾವಿಗೆ ಕಾರಣವಾಯ್ತು ವಾಟ್ಸಪ್ ಸ್ಟೇಟಸ್ ; ಮನನೊಂದು ಆತ್ಮಹತ್ಯೆಗೆ ಶರಣು
ರಾಯಬಾಗ : ಮದುವೆಯಾಗಿದ್ದರೂ ಸ್ನೇಹಿತನ ಸಹವಾಸಕ್ಕೆ ಬಿದ್ದು ವಾಟ್ಸಪ್ ಸ್ಟೇಟಸ್ ಕಾರಣಕ್ಕೆ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಆರತಿ ಪ್ರಶಾಂತ ಕಾಂಬಳೆ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಪ್ರಶಾಂತ ಕಾಂಬಳೆ ಎಂಬಾತನ ಜೊತೆ ಮದುವೆಯಾಗಿತ್ತು. ಸುಂದರ ಬದುಕು ನಡೆಸುತ್ತಿದ್ದ ಕುಟುಂಬದಲ್ಲಿ ಆರತಿ ಜೊತೆ ಸ್ನೇಹ ಬೆಸೆದವನು ಅದೇ ಗ್ರಾಮದ ಸಾಗರ ಕಾಂಬಳೆ.
ಆರತಿ ಪತಿಯ ಜೊತೆ ಸಾಗರ ಜೊತೆಗೂ ಸಂಬಂಧ ಹೊಂದಿದ್ದಳು. ಕದ್ದು, ಮುಚ್ಚಿ ನಡೆಯುತ್ತಿದ್ದ ಇಬ್ಬರ ಪ್ರೇಮ ಪುರಾಣ ಸಾಗರ್ ತನ್ನ ವಾಟ್ಸಪ್ ನಲ್ಲಿ ಪ್ರೇಯಸಿ ಪೋಟೋ ಸ್ಟೇಟಸ್ ಇಟ್ಟುಕೊಂಡಿದ್ದಾನೆ. ಯಾವಾಗ ತನ್ನ ಪೋಟೋ ಸಾಗರ್ ಸ್ಟೇಟಸ್ ಗೆ ಬಂತು ಆಗಲೇ ಆರತಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ.
ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಯಲ್ಲಿ ಆರತಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ರಾಯಬಾಗ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದರು. ರಾಯಬಾಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.