ಉತ್ತರ ಕನ್ನಡ : 80 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬೆಳಕಲ್ಲಿ ಭಾಷಣ ಓದಿದ ಘಟನೆ ನಡೆದಿದೆ.
ಕಾರವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಪಥಸಂಚಲನ ವೀಕ್ಷಿಸಿದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಭಾಷಣ ಓದಲು ಮಂದ ಬೆಳಕು ಅಡ್ಡಿಯಾಗಿದೆ.
ಈ ವೇಳೆ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದ್ದಾರೆ. ನಂತರ ಅಧಿಕಾರಿಗಳು ಪೋಡಿಯಂ ಸ್ಥಳಾಂತರ ಮಾಡಿ ಓದಲು ಸಹಕರಿಸಿದ್ದಾರೆ. ಈ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದಿದ್ದಕ್ಕೆ ಅಸಮಾಧಾನ ಹೊರಹಾಕಿದರು.


