
ಬೆಳಗಾವಿ – ಚಿಕ್ಕಮಗಳೂರು ಸೈಕಲ್ ಸವಾರಿ ; ಏನು ಕಾರಣ ಗೊತ್ತಾ….?

ಚನ್ನಮ್ಮನ ಕಿತ್ತೂರು: ಸಂಕೇಶ್ವರದಿಂದ ಚಿಕ್ಕಮಗಳೂರಿನ ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ ಹೊರಟಿರುವ ಸೈಕಲ್ ಪಟು ರಮೇಶ ಪೂಜಾರಿ ಅವರ ಸೈಕಲ್ ಜಾಥಾ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದಾಗ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ ಬರಮಾಡಿಕೊಂಡು, ಬೀಳ್ಕೊಟ್ಟರು.
ಅನ್ನ ಕೊಡುವ ರೈತ, ದೇಶದ ಗಡಿ ಕಾಯುವ ಸೈನಿಕ ಮತ್ತು ದೇಶದ ಒಳಗಡೆ ಶಾಂತಿ ಸುವ್ಯವಸ್ಥೆ ಕಾಪಾಡುವ ಪೋಲಿಸ್ ರು ನಮ್ಮ ದೇಶದ ನಿಜವಾದ ಹೀರೊಗಳು. ದಯವಿಟ್ಟು ನಮ್ಮ ಜನ ಪ್ರತಿನಿಧಿಗಳು ಪೋಲಿಸ್ ಅಧಿಕಾರಿಗಳನ್ನು ಸಾರ್ವಜನಿಕರ ಮುಂದೆ ಏಕ ವಚನದಿಂದ ಮಾತನಾಡಬಾರದು.
ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೋಲಿಸ್‌ರಿಂದ ಮಾತ್ರ ಸಾಧ್ಯ. ದಯವಿಟ್ಟು ನಮ್ಮ ಜನ ಪ್ರತಿನಿಧಿಗಳು ಪೋಲಿಸ್‌ರನ್ನು ಗೌರವಿಸಿ ಅವರಿಗೆ ಧೈರ್ಯ ತುಂಬಬೇಕು. ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಹಾಗೂ ಯುವಕರು ಮೊಬೈಲ್ ಮಿತ ಬಳಕೆ ಮಾಡಬೇಕೆಂದು ಎಂದು ಸಂದೇಶ ಸಾರಲು 74ನೇ ವಯಸ್ಸಿನ ಸೈಕಲ್ ಪಟು ರಮೇಶ ಪೂಜಾರಿ ಸೈಕಲ್ ಜಾಥಾ ಪ್ರಾರಂಭಿಸಿದರು.