VIDEO : ಮಹಿಳೆ ಮೇಲೆ ಕಾರ್ ಹರಿಸಿದ ಚಾಲಕನಿಗೆಹಿಗ್ಗಾಮುಗ್ಗಾ ಥಳಿತ
ಬೆಳಗಾವಿ : ಬಸವೇಶ್ವರ ವೃತ್ತದ ಬಳಿ ಇರುವ ಎಲ್ಐಸಿ ಕಚೇರಿಯ ಆವರಣದಲ್ಲಿ ಕಸಗೂಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಚಲಾಯಿಸಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಈ ಸಂದರ್ಭದಲ್ಲಿ ಕಾರು ಚಾಲಕನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಟಿಳಕವಾಡಿಯ ಪಿ.ಕೆ.ಕ್ವಾರ್ಟಸ್ ನಲ್ಲಿರುವ ಅನಿತಾ ರಾಜೇಶ ಬನ್ಸ್ (52) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಎಂದಿನಂತೆ ಎಲ್ ಐಸಿ ಕಚೇರಿ ಆವರಣ ಶುಚಿಗೊಳಿಸುತ್ತಿದ್ದ ಅನಿತಾ ಇಂದು ಕಸ ಗೂಡಿಸಲು ಆಗಮಿಸಿದ್ದಾಳೆ. ಈ ವೇಳೆ ಎಲ್ ಐ ಸಿ ಆವರಣದಿಂದ ಕಾರು ಹೊರಗಡೆ ತಗೆಯುವಾಗ ಗುರುರಾಜ ಕುಲಕರ್ಣಿ ಎಂಬುವವ ಕಸಗುಡಿಸುತ್ತಿದ್ದ ಅನಿತಾಗೆ ಗುದ್ದಿದ್ದಾನೆ. ಕಾರ್ ಗುದ್ದಿದ ರಬಸಕ್ಕೆ ಅನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಅನಿತಾ ಕುಟುಂಬಸ್ಥರು ಹಾಗೂ ಸ್ಥಳೀಯರು ಕಾರ್ ಚಾಲನೆ ಮಾಡುತ್ತಿದ್ದ ಕುಲಕರ್ಣಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ