ಕದ್ದ ಹಣದಲ್ಲಿ ತಾಯಿಗೆ ಚಿನ್ನ ಕೊಡಿಸಿದ ಮುದ್ದಿನ ಮಗ ; ಎಟಿಎಂ ದರೋಡೆಕೋರನ ಹೆಡೆಮುರಿ ಕಟ್ಟಿದ ಮಾರ್ಕೆಟ್ ಠಾಣೆ ಪೊಲೀಸ್
ಬೆಳಗಾವಿ : ಹೆತ್ತ ತಾಯಿಗೆ ಚಿನ್ನ ಕೊಡಿಸುವುದಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಎಟಿಎಂ ನಿಂದ ಹಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷ್ಣಾ ಸುರೇಶ್ ದೇಸಾಯಿ ( 23 ) ಬಂಧಿತ ಆರೋಪಿ. ಕಳೆದ ನವೆಂಬರ್ 30 ರಂದು ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜುಮನ್ ಬಿಲ್ಡಿಂಗ್ ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂ ನಿಂದ 8 ಲಕ್ಷ 65 ಸಾವಿರ ರು. ಹಣ ಎಗರಿಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ನಗರದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಬಂಗಾರದ ಆಭರಣ ಹಾಗೂ ಹಣವನ್ನು ವಶಪಡಿಕೊಂಡಿದ್ದಾರೆ.
ಘಟನೆ ವಿವರ : ಬಂಧಿತ ಆರೋಪಿ ಕ್ರಿಷ್ಣ ಸುರೇಶ್ ದೇಸಾಯಿ ಈತ ( ಎಸ್ ಐ ಎಸ್ ) ನ ಪ್ರೋಸಿಗರ್ ಹೋಲ್ಡಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂಸ್ಥೆ ಎಟಿಎಮ್ ಸಂಭಂಧಿಸಿದ ಕೆಲಸ ಮಾಡುತ್ತಿದ್ದು ಆರೋಪಿ ಇಲ್ಲಿ ನೌಕರನಾಗಿದ್ದ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ನಿವಾಸಿಯಾದ ಆರೋಪಿ ಕೃಷ್ಣಾ ಎಡಿಎಮ್ ಕಾಂಬಿನೇಷನ್ ಪಾಸ್ ವರ್ಡ್ ಬಳಸಿಕೊಂಡು ಹೆಚ್.ಡಿ ಎಫ್ ಸಿ ಎಟಿಎಂ ನಿಂದ 8 ಲಕ್ಷ 65 ಸಾವಿರ ರು. ಹಣ ಎಗರಿಸಿ ಪರಾರಿಯಾಗಿದ್ದ.
ಆರೋಪಿ ಬಂಧನಕ್ಕೆ ಮಾರ್ಕೆಟ್ ಠಾಣೆ ಇನ್ಸ್ಪೆಕ್ಟರ್ ಮಹಾಂತೇಶ್ ಧಾಮಣ್ಣವರ ನೇತೃತ್ವದಲ್ಲಿ ಪಿಎಸ್ಐ ಗಳಾದ ಮಹಾಂತೇಶ್ ಮಠಪತಿ, ವಿಠ್ಠಲ ಹಾವನ್ನವರ, ಹೆಚ್.ಎಲ್ ಕೆರೂರ ಜೊತೆ ಸಿಬ್ಬಂದಿಗಳಾದ ಲಕ್ಷ್ಮಣ, ಶಂಕರ್, ಎ,ಎಸ್ ಪಾಟೀಲ ಸೇರಿದಂತೆ ಅನೇಕರ ಒಳಗೊಂಡ ತಂಡ ಆರೋಪಿನ್ನು ಎರಡು ದಿನದಳ ಒಳಗೆ ಬಂಧಿಸಿ ಆತನಿಂದ 20 ಗ್ರಾಂ ಬಂಗಾರದ ಆಭರಣ ಸೇರಿದಂತೆ 7. 30 ಲಕ್ಷ ರು. ಹಣ ಹಾಗೂ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.