
ಕ್ರಿಕೆಟಿಗ ರಾಹುಲ್ ದ್ರಾವಿಡ್ ಕಾರು ಅಪಘಾತ ; ಇವರು ನಡೆದುಕೊಂಡ ರೀತಿ ಹೇಗಿತ್ತು..?

ಬೆಂಗಳೂರು : ಭಾರತೀಯ ಕ್ರಿಕೆಟಿನ ದಂತಕಥೆ ದಿ ವಾಲ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನಡೆದುಕೊಂಡ ರೀತಿ ನಿಜಕ್ಕೂ ಅವರೊಬ್ಬ ಜೆಂಟಲ್ ಮನ್ ಎಂಬುದನ್ನು ಸಾರಿ ಹೇಳಿದಂತಿದೆ.
ಹೌದು ಕೆಲಸದ ಮುಗಿಸಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ರಾಹುಲ್ ದ್ರಾವಿಡ್ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ನಲಿ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ವಾಹನಗಳು ನಿಂತಿತ್ತು. ಆದರೆ ಗೂಡ್ಸಸ್ ಆಟೋ ಚಾಲಕ ನಿಂತಿದ್ದ ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ್ದಾನೆ.
ಇದರಿಂದ ರಾಹುಲ್ ದ್ರಾವಿಡ್ ಕಾರಿನ ಲೈಟ್ ಪುಡಿಯಾಗಿದೆ. ಹಾಗೂ ಇತರ ಭಾಗಗಳು ಸ್ಕ್ರಾಚ್ ಬಿದ್ದಿದೆ. ಗೂಡ್ಸ್ ಆಟೋ ಕಾರಿಗೆ ಡಿಕ್ಕಿಯಾಗುತ್ತಿದ್ದಂತೆ ರಾಹುಲ್ ದ್ರಾವಿಡ್ ಕಾರಿನಿಂದ ರಸ್ತೆಗೆ ಇಳಿದಿದ್ದಾರೆ.
ಡ್ರೈವರ್ ಜೊತೆ ಮಿತವಾಗಿ ಮಾತನಾಡಿದ ದ್ರಾವಿಡ್ ಅವರು ನಂತರ ಜನ ಸೇರುತ್ತಿದ್ದಂತೆ ಆತನ ನಂಬರ್ ಪಡೆದು ತೆರಳಿದ್ದಾರೆ. ಸಧ್ಯ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ದಿ ವಾಲ್ ಅವರ ವರ್ತನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.