VIDEO – ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಬಿಜೆಪಿ ಶಾಸಕ
ತ್ರಿಪುರ : ವಿಧಾನಸಭೆಯಲ್ಲಿ ಅಶ್ಲೀಲ ವೀಡಿಯೊ ಪ್ರಕರಣ ಸಧ್ಯ ತ್ರಿಪುರದಲ್ಲಿ ನಡೆದಿದ್ದು ಬಿಜೆಪಿ ಶಾಸಕ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದಿದ್ದಾರೆ.
ತ್ರಿಪುರಾದ ಬಾಗ್ಬಸಾ ಕ್ಷೇತ್ರದ ಶಾಸಕರಾಗಿರುವ ಜದಬ್ ಲಾಲ್ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ನೀಲಿಚಿತ್ರದ ಕ್ಲಿಪ್‌ಗಳನ್ನು ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ತ್ರಿಪುರಾ ಪ್ರದೇಶ ಯುವ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. “ಶಾಸಕ ಜದಬ್ ಲಾಲ್ ದೇವನಾಥ್ ಅವರು ವಿಧಾನಸಭೆ ಕಲಾಪದ ವೇಳೆ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದರು. ಈವರೆಗೂ ಅವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅದು ಟೀಕಿಸಿದೆ. ಜದಬ್ ಲಾಲ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ