
ಅಥಣಿ ಆಸ್ಪತ್ರೆಯಲ್ಲಿ ಬಾಣಂತಿ ಸಾವಿನ ಕಾರಣ ಬಯಲು

ಅಥಣಿ : ಕಳೆದ ಜ. 23 ರಂದು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ ಸಾವಿಗೆ ಏನು ಕಾರಣ ಎಂಬುದನ್ನು ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೊನೆಗೂ ಬಹಿರಂಗಪಡಿಸಿದ್ದಾರೆ.
ಜ. 23 ರಾತ್ರಿ ಮುಗಳಖೋಡ ಪಟ್ಟಣದ ಬಾಣಂತಿ ಮುತ್ತವ್ವಾ ಗೊಳಸಂಗಿ (21) ಹೆರಿಗೆ ನಂತರ ಸಾವಣಪ್ಪಿದ್ದರು. ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬದವರು ಆರೋಪ ಮಾಡಿದ್ದರು.
ಪಟ್ಟಣದ ಸರಕಾರಿ ಆಸ್ಪತೆಗೆ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಎಸ್. ಕೆ ವಂಟಿಗೂಡಿ ಭೇಟಿನೀಡಿ, ಬಾಣಂತಿ ಸಾವಿನ ಕುರಿತು ಮಾಹಿತಿ ಕಲೆ ಹಾಕಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಇವರು. ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬಾಣಂತಿ ಸಾವು ಪ್ರಕರಣಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ ಎಂದು ಹೇಳಿದ್ದಾರೆ.
ಬಾಣಂತಿ ಮುತ್ತವ್ವ ಗೊಳಸಂಗಿ ಅವರಿಗೆ ಹೆರಿಗೆ ನಂತರ ನೀಡಬೇಕಾದ ಎಲ್ಲ ಚಿಕಿತ್ಸಾ ವಿಧಾನಗಳನ್ನು ಬಳಕೆ ಮಾಡಲಾಗಿದೆ, ದೇಹದಲ್ಲಿ ಆದ ತಕ್ಷಣದ ಬದಲಾವಣೆಗಳಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿ ಇರುವ ಎಲ್ಲ ಸೌಲತ್ತುಗಳನ್ನು ವೈದ್ಯರು ಬಳಕೆ ಮಾಡಿದ್ದಾರೆ ಎಂದರು.